ಪತಿಗಾಗಿ ದೇವಾಲಯ ಕಟ್ಟಿಸಿದ ಪತ್ನಿ, ಬಡವರಿಗೆ ಅನ್ನದಾನ ವ್ಯವಸ್ಥೆ..!
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು , ಗೌರವಾನ್ವಿತ ವ್ಯಕ್ತಿಗಳಿಗಾಗಿ ಗುಡಿಕಟ್ಟಿಸುವ ಟ್ರೆಂಡ್ ಶುರುವಾಗಿದೆ.. ತಮಿಳುನಾಡಿನಲ್ಲಿ ಮೋದಿಗಾಗಿ ರೈತರೊಬ್ಬರು ದೇವಾಲಯ ಕಟ್ಟಿದ್ದನ್ನ ಇಲ್ಲಿ ನಾವು ಸ್ಮರಿಸಬಹುದು.. ಆದ್ರೆ ಇಲ್ಲೊಬ್ಬ ಪತ್ನಿ ತನ್ನ ದಿವಂಗತ ಪತಿಗಾಗಿ ಗುಡಿ ಕಟ್ಟಿಸಿ ಗಮನ ಸೆಳೆದಿದ್ದಾರೆ.. ಹೌದು.. ಕೆಲ ದಿನಗಳ ಹಿಂದೆ ದಿವಂಗತ ಪತಿ ಕನಸಲ್ಲಿ ಬಂದಿದ್ದು, ದೇವಾಲಯ ನಿರ್ಮಾಣ ಮಾಡಲು ಕೇಳಿಕೊಂಡಿದ್ದರಂತೆ.. ಹೀಗಾಗಿ ಮಹಿಳೆ ತನ್ನ ಪತಿಗಾಗಿ ಗುಡಿ ಕಟ್ಟಿಸಿರುವುದಾಗಿ ಹೇಳಿಕೊಂಡಿದ್ದಾರೆ.. ಈ ಅಪರೂಪದ ಪ್ರಸಂಗ ನಡೆದಿರುವುದು ಆಂಧ್ರಪ್ರದೇಶದಲ್ಲಿ. ಅಷ್ಟೇ ಅಲ್ಲ ದೇವಾಲಯದಲ್ಲಿ ಹಸಿದವರಿಗೆ ಬಡವರಿಗೆ ಅನ್ನದಾನ ಮಾಡುವುದಾಗಿಯೂ ಮಹಿಳೆ ಹೇಳಿಕೊಂಡಿದ್ದಾರೆ..
ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿ ದೇಗುಲ ನಿರ್ಮಾಣ ಮಾಡಿ ಅದ್ರಲ್ಲಿ ಪತಿಯ ವಿಗಗ್ರಹ ಸ್ಥಾಪಿಸಿ ಆ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿರುವ ಪತ್ನಿ ಪದ್ಮಾವತಿ ತನ್ನ ತಾಯಿಯಂತೆಯೇ ಪತಿಯನ್ನ ಪರದೈವ ಅಂದುಕೊಂಡಿದ್ದಾರೆ.. ಅವರ ತಾಯಿ ಅವರ ತಂದೆಯನ್ನ ಪೂಜೆ ಮಾಡುತ್ತಿದ್ದನ್ನ ನೋಡಿ ಪ್ರೇರೇಪಿತರಾಗಿದ್ದಾರೆ.. 4 ವರ್ಷದ ಹಿಂದೆ ಈ ಮಹಿಳೆಯ ಪತಿ ದುರಾದೃಷ್ಟವಸಾತ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು..
ಅಮೃತಶಿಲೆಯಲ್ಲಿ ಪತಿಯ ಪ್ರತಿಮೆ ಸ್ಥಾಪಿಸಿ ಅದಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.. ಅಲ್ಲದೇ ತನ್ನ ಪತಿ ಜೀವಂತವಾಗಿದ್ದಾಗಲೂ ಅವರನ್ನ ದೇವರಂತೆ ಕಾಣುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಪತಿ ಅಂಕಿ ರೆಡ್ಡಿ ಜನ್ಮ ದಿನ ಸೇರಿದಂತೆ ವಿಶೇಷ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅಭಿಶೇಷಕಗಳನ್ನ ನಡೆಸಲಾಗುತ್ತದೆ ಎಂದು ಸಹ ಪದ್ಮಾವತಿ ಅವರು ಹೇಳಿಕೊಂಡಿದ್ದಾರೆ. ಪ್ರತಿ ಹುಣ್ಣಿಮೆಗೂ ವಿಶೇಷ ಪೂಜೆ ನೆರವೇರಿಸುವ ಜೊತೆಗೆ ದೇಗುಲದಲ್ಲಿ ಹಸಿದು ಬಂದವರಿಗೆ ಬಡವರಿಗಾಗಿ ಅನ್ನಸಂತರ್ಪಣೆ ಮಾಡುವುದಾಗಿಯೂ ತಿಳಿಸಿದ್ದರೆ..
ಕೊರೊನಾ ಆತಂಕ : ತುಮಕೂರಲ್ಲಿ ದೇವಸ್ಥಾನ, ಪ್ರವಾಸಿತಾಣಗಳು ಬಂದ್
ಪೂಜೆ ಸೇರಿದಂತೆ ಇತರೇ ಸೇವೆಗಳನ್ನ ಆಕೆಯ ಪುತ್ರ ಶಿವಶಂಕರ್ ರೆಡ್ಡಿ ಸಲ್ಲಿಸುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಇವರ ಕೆಲಸಕ್ಕೆ ಅಂಕಿ ರೆಡ್ಡಿ ಅವರ ಸ್ನೇಹಿತ ತಿರುಪಾಟಿ ರೆಡ್ಡಿ ಅವರು ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ರೀತಿಯಾದ ಘಟನೆ ತೆಲಂಗಾಣದಲ್ಲಿಯೂ ಬೆಳಕಿಗೆ ಬಂದಿತ್ತು.. ತಾತನಿಗಾಗಿ ಮೊಮ್ಮಗ ಮಂದಿರ ಕಟ್ಟಿ ತಾತನ ವಿಗ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.. ನಾವಲಗ ಗ್ರಾಮದಲ್ಲಿ ಮೋಗುಲಪ್ಪ ಎಂಬಾತ ಮಕ್ಕಳಿಲ್ಲದ ಕಾರಣಕ್ಕೆ ಮಗುವೊಂದನ್ನ ದತ್ತು ಪಡೆದು ಸಾಕಿದ್ದರು.. 2013ರಲ್ಲಿ ಅವರು ಮೃತಪಟ್ಟಿದ್ದರು..ಆನಂತರ ಅವರ ದತ್ತು ಮೊಮ್ಮಗ ಈಶ್ವರ್ ತಾತನಿಗಾಗಿ ಗುಡಿ ಕಟ್ಟಿಸಿದರು.. ಗುಡಿ ನಿರ್ಮಾಣಕ್ಕೆ ಸುಮಾರು 24 ಲಕ್ಷ ಖರ್ಚಾಗಿದ್ದಾಗಿಯೂ ಹೇಳಿಕೊಂಡಿದ್ದರು.








