ಬೆಳಗಿನ ಉಪಹಾರಕ್ಕೆ ಪತಿ ತನ್ನಿಷ್ಟದ ಅವಲಕ್ಕಿ ಮಾಡದೆ, ಡ್ರೈ ಫ್ರೂಟ್ಸ್ ತಿನ್ನಲು ಕೊಟ್ಟಿದ್ದಾನೆಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಘಟನೆ ನಡೆದಿದೆ. ಗಂಡ ಅವಲಕ್ಕಿ ಮಾಡಿಲ್ಲವೆಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ಮುರಾರ್ ಪ್ರದೇಶದ ಬಾಲ್ಕಿಶನ್ ಜದೌನ್ ಎಂಬವರು ಒಂದು ವರ್ಷದ ಹಿಂದೆ ಕವಿತ ಎಂಬುವವರನ್ನು ವಿವಾಹವಾಗಿದ್ದರು. ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕೆ ದುಡುಕು ನಿರ್ಧಾರ ತೆಗೆದುಕೊಂಡು ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶನಿವಾರ ಕವಿತಾ ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿ ಮಾಡಿಕೊಡು ಎಂದು ಪತಿಗೆ ಹೇಳಿದ್ದಾರೆ. ಆದರೆ, ಪತಿ ಕೇವಲ ಡ್ರೈ ಫ್ರೂಟ್ಸ್ ನೀಡಿದ್ದರು. ಸಿಟ್ಟಿಗೆದ್ದ ಕವಿತಾ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿದ್ದಾರೆ.