wife committed suicide
ಕೆಲದಿನಗಳ ಹಿಂದೆ ಹೆಂಡತಿ ಮನೆ ಬಿಟ್ಟು ಹೋದಳು ಎಂದು ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಹೊಳ್ಳಪ್ಪ ಮತ್ತು ವಾಸಂತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಬೇರೆ ಜಾತಿಯಾದರು ತಮ್ಮ ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದರು. ಐದು ವರ್ಷ ದಾಂಪತ್ಯ ಚೆನ್ನಾಗಿತ್ತು ಆದರೆ ಸ್ವಲ್ಪ ದಿನಗಳ ಹಿಂದೆ ಸಂಸಾರದಲ್ಲಿ ಸಣ್ಣ ಬಿರುಕು ಮುಡಿತ್ತು.
ಹೆಂಡತಿ ವಾಸಂತಿ ಗಂಡ ಹೊಳ್ಳಪ್ಪನ ಜತೆಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು ,ಇತ್ತ ಗಂಡ ಸಿಕ್ಕಾಪಟ್ಟೆ ಕುಡಿಯಲು ಆರಂಭಿಸಿದ್ದ. ಅಕ್ಟೋಬರ್ 20ರಂದು ಕಂಠಪೂರ್ತಿ ಕುಡಿದ ಹೊಳ್ಳಪ್ಪ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .
ಹೆಂಡತಿ ಬಿಟ್ಟು ಹೋದಳು ಅನ್ನೋ ಕಾರಣಕ್ಕೆ ಇತ್ತ ಹೊಳ್ಳಪ್ಪ ಸಾವನ್ನಪ್ಪಿದ್ದಾನೆ. ಇತ್ತ ಗಂಡನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಹೆಂಡತಿ ವಾಸಂತಿ ಗಂಡನ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ. ಅತಿಯಾಗಿ ನೊಂದಿದ್ದ ವಾಸಂತಿ ಮರುದಿನ ಅಕ್ಟೋಬರ್ 21 ರಂದು ಪ್ರೀತಿಸಿದ ಗಂಡನೇ ಹೋದ ಮನನೊಂದು ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬೇರೊಬ್ಬರ ಜಮೀನಿಗೆ ಹೋಗಿದ್ದಾಳೆ.
ತನ್ನ ಮೂರು ವರ್ಷದ ಮಗುವನ್ನು ಕಮಲವ್ವಾ ಎನ್ನುವವರ ಮನೆಯಲ್ಲಿ ಬಿಟ್ಟು, ಒಂದೂವರೆ ವರ್ಷದ ಮಾನಸಾಳನ್ನ ಎರಡನೆ ಮಗಳನ್ನ ಕರೆದುಕೊಂಡು ಜಮೀನಿಗೆ ಹೋದ ವಾಸಂತಿ ಯಾರು ಇಲ್ಲದ್ದನ್ನ ನೊಡಿಕೊಂಡು ಮಗಳು ಮಾನಸಾಳನ್ನ ಮೊದಲು ಕೊಲೆ ಮಾಡಿದ್ದಾಳೆ. ನಂತರ ಅಲ್ಲೇ ಇದ್ದ ಮರಕ್ಕೆ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ವಿಷಯ ತಿಳಿದ ಕಾಕತಿ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಶವಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ ನಂತರ ತಾಯಿ ಹಾಗೂ ಮಗಳ ಅಂತ್ಯಸಂಸ್ಕಾರ ನೆರವೇರಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.








