ಮಂಗಳೂರಿನಲ್ಲಿ ಅಪಘಾತದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಸಾವು
ಮನನೊಂದು ಮಗು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ
ರಾಯಚೂರಿನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದ ಪತ್ನಿ
ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗರಾಮ್
ರಸ್ತೆ ಅಪಘಾತದಲ್ಲಿ ಮಂಗಳೂರಿನನಲ್ಲಿ ಪತಿ ಮೃತಪಟ್ಟ ವಿಚಾರ ಗೊತ್ತಾಗ್ತಿದ್ದಂತೆ ಇತ್ತ ರಾಯಚೂರಿನಲ್ಲಿ 6 ತಿಂಗಳ ಮಗುವನ್ನ ಕೊಂದು ಪತ್ನಿಯೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ..
ಉಡುಪಿಯ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗರಾಮ್ ಮಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು..
ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ್.ಬಿ ಕಮ್ಮಾರ್(36) ಮೃತ ದುರ್ದೈವಿಯಾಗಿದ್ದಾರೆ.. ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ರಾಯಚೂರಿನಲ್ಲಿದ್ದ ಪತ್ನಿಗೆ ಆಗಾತವಾಗಿದೆ.. ಪತಿಯ ಸಾವಿವ ಸುದ್ದಿ ಅರಗಿಸಿಕೊಳ್ಳಲಾಗದೇ ಮೊದಲಿಗೆ ತನ್ನ 6 ತಿಂಗಳ ಮಗ ಅಭಿಲಾಷ್ ನನ್ನ ಕೊಂದು ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿದ್ಧಾರೆ..
wife killed baby and committed sucide after heard about her husband’s death in an acccident happend in manglore








