ಕೋಟ್ಯಾಧೀಶ್ವರ ಪತಿಯ ಬರ್ಬರ ಹತ್ಯೆಗೈದು ಹೈಡ್ರಾಮಾ ಮಾಡಿದ ಪತ್ನಿ
ಬೆಂಗಳೂರು : ಪತ್ನಿಯೇ ಪತಿಯನ್ನ ಬರ್ಬರವಾಗಿ ಕೊಲೆ ಮಾಡಿ ನಾಟವಾಡಿರುವ ಘಟನೆ ನೆಲಮಂಗಲ ಸಮೀಪದ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಾಮಿ ರಾಜ್ (50) ಎಂಬಾತನನ್ನ ಆತನ ಪತ್ನಿ ನೇತ್ರವಾತಿ ಎಂಬಾಕೆ ರಿಂಗ್ ಸ್ಪಾನರ್ ನಿಂದ ಬಡಿದು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಪತಿ ಆಕೆಯನ್ನ ಬೇರೊಬ್ಬರ ಜೊತೆಗೆ ಅಕ್ರಮ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಹಿನ್ನೆಲೆ ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲಿಗೆ ಪತಿ ಕೊಲೆ ಮಾಡಿ ಠಾಣೆಗೆ ಬಂದು ಪತ್ನಿ ನೇತ್ರಾವತಿ ಹೈಡ್ರಾಮ ಮಾಡಿದದ್ದಳಂತೆ.. ಇದರಿಂದ ಪೊಲೀಸ್ರಿಗೂ ಅನುಮಾನ ಮೂಡಿದೆ. ಸ್ವಾಮಿರಾಜ್ ಕೋಟೀ ಕೋಟಿ ಆಸ್ತಿಯ ಒಡೆಯನಾಗಿದ್ದ. ಈತ ತನ್ನ 2ನೇ ಪತ್ನಿ ನೇತ್ರಾವತಿಗಾಗಿ 4 ಕೋಟಿ ಮನೆ, ಓಡಾಡೋಕೆ ಕಾರು ಕೊಡಿಸಿದ್ದ. ಅಲ್ಲದೇ ಈಕೆಗಾಗಿ ಪರಿವಾರವನ್ನೂ ದೂರಮಾಡಿಕೊಂಡಿದ್ದನಂತೆ.
ಆದ್ರೆ ಇಷ್ಟೆಲ್ಲಾ ಮಾಡಿ ಪ್ರೀತಿಸಿದ್ದ ಪತ್ನಿಯನ್ನು ಬೇರಯವರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಆತ ಹೇಳಿದ್ದ ಎಂಬ ಪತ್ನಿಯ ಆರೋಪದ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಸದ್ಯ ಪೊಲೀಸರು ಆರೋಪಿ ನೇತ್ರಾವತಿ ಸಿಡಿಆರ್ ಪರಿಶೀಲನೆ ನಡೆಸ್ತಿದ್ದಾರೆ. ರಾತ್ರಿ ಸ್ಚಾಮಿರಾಜ್ ಮನೆಗೆ ಯಾರದ್ರೂ ಬಂದಿದ್ರಾ ಎನ್ನುವುಧರ ಪರಿಶೀಲನೆ ನಡೆಸ್ತಾಯಿದ್ದಾರೆ ಎಂದು ತಿಳಿದುಬಂದಿದೆ.