ಹಾಸನ: ಪತ್ನಿ ತುಂಡುಡುಗೆ ಧರಿಸುತ್ತಾಳೆಂದು ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಜ್ಯೋತಿ(22) ಕೊಲೆಯಾದ ಮಹಿಳೆ ಎನ್ನಲಾಗಿದ್ದು, ಜೀವನ್ ಕೊಲೆ ಮಾಡಿರುವ ಆರೋಪಿ ಪತಿ.
ತುಂಡು ಬಟ್ಟೆ ಧರಿಸುತ್ತಾಳೆಂದು ಸಿಟ್ಟು ಮಾಡಿಕೊಂಡಿದ್ದ ಪತಿ ಆಕೆಯ ಜೊತೆ ಜಗಳವಾಡಿದ್ದಾನೆ. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ದಂಪತಿ ಕಳೆದ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಜ್ಯೋತಿಗೆ ತುಂಡು ಬಟ್ಟೆ ಧರಿಸುವುದು, ಮಾಡರ್ನ್ ಉಡುಪು ಧರಿಸುವುದು ತುಂಬಾ ಇಷ್ಟ. ಆದರೆ, ಬಟ್ಟೆ ವಿಚಾರಕ್ಕೆ ಆಗಾಗ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.