ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ – ಪಂಜಾಬ್ ಮುಖ್ಯಮಂತ್ರಿ
ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಅವರ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದರು. ಇದಕ್ಕೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಚನ್ನಿ ಅವರನ್ನ “ಅಪ್ರಾಮಾಣಿಕ ವ್ಯಕ್ತಿ” ಎಂದು ಟೀಕಿಸಿದ್ದರು,. ಇದಕ್ಕೆ ಪ್ರತಿಯಾಗಿ ಪಂಜಾಬ್ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ಧಮೆ ಹೂಡುವುದಾಗಿ ತಿಳಿಸಿದ್ದಾರೆ.
ತಮ್ಮ ಇಮೇಜ್‌ಗೆ ಧಕ್ಕೆ ತರಲು ಇತರರ ವಿರುದ್ಧ ಆರೋಪಗಳನ್ನು ಮಾಡುವುದು ಕೇಜ್ರಿವಾಲ್ ಅವರ ಅಭ್ಯಾಸವಾಗಿದೆ ಎಂದು ಪ್ರತಿಪಾದಿಸಿದ ಚನ್ನಿ, ಈ ಹಿಂದೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ನಿತಿನ್ ಗಡ್ಕರಿ, ದಿವಂಗತ ಅರುಣ್ ಜೇಟ್ಲಿ ಮತ್ತು ಶಿರೋಮಣಿ ಅಕಾಲಿ ಅವರ ಕ್ಷಮೆಯನ್ನೂ ಕೇಳಬೇಕಾಗಿ ಬಂದಿತ್ತು.
“ನಾನು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಮತ್ತು ಅದಕ್ಕೆ ಅನುಮತಿ ನೀಡುವಂತೆ ನನ್ನ ಪಕ್ಷಕ್ಕೆ ಮನವಿ ಮಾಡಿದ್ದೇನೆ. ಅವರು ನನ್ನನ್ನು ಅಪ್ರಾಮಾಣಿಕ ಎಂದು ಕರೆಯುತ್ತಿದ್ದಾರೆ ಮತ್ತು ಅವರು ಅದನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ ”ಎಂದು ಪಂಜಾಬ್ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ, ಕೇಜ್ರಿವಾಲ್ ಅವರು ಟ್ವೀಟರ್ ನಲ್ಲಿ “ಆಮ್ ಆದ್ಮಿ” ಅಲ್ಲ ಆದರೆ “ಬಾಯಿಮಾನ್ ಆದ್ಮಿ ಹೈ (ಚನ್ನಿ ಸಾಮಾನ್ಯ ವ್ಯಕ್ತಿಯಲ್ಲ, ಅವರು ಅಪ್ರಾಮಾಣಿಕ ವ್ಯಕ್ತಿ)” ಎಂದು ಟ್ವೀಟ್ ಮಾಡಿದ್ದರು.