2023ರ ಪಾಕ್ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡುತ್ತಾ ?

1 min read
team india pakistan fans saakshatv

2023ರ ಪಾಕ್ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡುತ್ತಾ ?

Will Team India skip 2023 Asia Cup in Pakistan? saakshatv

2021ರ ಏಷ್ಯಾಕಪ್ ಟೂರ್ನಿ ಬಹುತೇಕ ರದ್ದುಗೊಂಡಿದೆ. ಜೂನ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಟೂರ್ನಿಗೆ ಅಂತಾರಾಷ್ಟ್ರೀಯ ವೇಳಾಪಟ್ಟಿ ಅಡ್ಡಿಯನ್ನುಂಟು ಮಾಡುತ್ತಿದೆ. ಹೀಗಾಗಿ ಪಾಕಿಸ್ತಾನ 2023ರ ಏಷ್ಯಾಕಪ್ ಟೂರ್ನಿಯನ್ನು ಆಯೋಜನೆ ಮಾಡಲಿದೆ. 2022ರ ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾ ಆತಿಥ್ಯ ವಹಿಸಲಿದೆ.

Will Team India skip 2023 Asia Cup in Pakistan? saakshatv

ಇಲ್ಲಿ ಪ್ರಶ್ನೆ ಉದ್ಭವಾಗಿರುವುದು 2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಭಾಗವಹಿಸುತ್ತಾ ಅನ್ನೋದು..? ಪಾಕ್ ನೆಲದಲ್ಲಿ ಭಾರತ ಕಾಲಿಡುವುದು ಸದ್ಯಕ್ಕಂತೂ ದೂರದ ಮಾತು. ನೆರೆಯ ರಾಷ್ಟ್ರಗಳ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಭಾರತ ಕ್ರಿಕೆಟ್ ತಂಡ ಪಾಕ್‍ಗೆ ಹೋಗುವುದು ಕನಸಿನ ಮಾತಾಗಿದೆ. ಅದೇ ರೀತಿ ಪಾಕ್ ತಂಡ ಭಾರತಕ್ಕೆ ಬರುವುದು ಕೂಡ ಅನುಮಾನವಾಗಿದೆ. ಹೀಗಾಗಿ 2021ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತಕ್ಕೆ ಪಾಕಿಸ್ತಾನ ಆಗಮಿಸುತ್ತಾ ಅನ್ನೋದನ್ನು ಕೂಡ ಕಾದು ನೋಡಬೇಕಿದೆ.
ಈ ನಡುವೆ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಏಹಾಸನ್ ಮಣಿ ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. 2023ರ ವೇಳೆ ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ಸರಿಯಾಗಬಹುದು. ಪಾಕ್ ನೆಲದಲ್ಲಿ ಭಾರತ ತಂಡ ಕ್ರಿಕೆಟ್ ಆಡಬಹುದು. ಏಷ್ಯಾಕಪ್ ನಲ್ಲೂ ಭಾಗವಹಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

#Ehsan Mani #pcb @bcci #pakistan #team india #saakshatvsports @Asiacup2023 #souravganguly

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd