T20 wc 2022 – ಈ ಸಲ ಕಪ್ ನಮ್ದೆ…
ಟಿ 20 ವರ್ಲ್ಡ್ ಕಪ್ 2022 ರಲ್ಲಿ ಸತತವಾಗಿ ಗೆಲುವುಗಳನ್ನು ಸಾಧಿಸಿ ಗ್ರೂಪ್ 2 ರಲ್ಲಿ ಮೊದಲ ಸ್ಥಾನದಲ್ಲಿದ್ದು, ಸೆಮೀಸ್ ಪ್ರವೇಶಿಸಿದೆ ಟೀಂ ಇಂಡಿಯಾ.
ಈ ಬಾರಿ ಶತಾಯಗತಾಯ ಟೀಂ ಇಂಡಿಯಾ ಟಿ 20 ವಿಶ್ವಕಪ್ ಗೆಲ್ಲಬೇಕೆಂದು ಪಣತೊಟ್ಟಿದೆ.
ಇತ್ತ ಭಾರತೀಯ ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಜವಾಬ್ದಾರಿಗಳನ್ನು ತೆಗೆದುಕೊಂಡ ಬಳಿಕ ಸುಮಾರಿ ಎಲ್ಲಾ ಮಾದರಿ ಕ್ರಿಕೆಟ್ ಮತ್ತು ಟೂರ್ನಿ ಅಥವಾ ಸರಣಿಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಮೊದಲ ಐಪಿಎಲ್, ಮೊದಲ ಚಾಂಪಿಯನ್ಸ್ ಲೀಗ್, ಮೊದಲ ವನ್ಡೆ, ಟಿ 20 ಸರಣಿ, ಮೊದಲ ತ್ರಿಕೋನ ಸರಣಿ, ಮೊದಲ ಟೆಸ್ಟ್ ಸರಣಿ, ಮೊದಲ ಏಷ್ಯಾಕಪ್ ಹೀಗೆ ಕ್ಯಾಪ್ಟನ್ ಆಗಿ ಅಧಿಕಾರ ತೆಗೆದುಕೊಂಡ ಮೊದಲ ಸರಣಿಗಳಲ್ಲಿ ರೋಹಿತ್ ಶರ್ಮಾ ಸಾರಥ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಇದೀಗ ಇದೇ ಸೆಂಟಿಮೆಂಟ್ ಮತ್ತೊಮ್ಮೆ ರಿಪೀಟ್ ಆಗುತ್ತದೆ ಅಂತಾ ಭಾರತೀಯ ಅಭಿಮಾನಿಗಳು ಭಾವಿಸುತ್ತಿದ್ದಾರೆ.
ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಇದೇ ಮೊದಲ ಟಿ 20 ವರ್ಲ್ಡ್ ಕಪ್ ಆಗಿದೆ. ಹೀಗಾಗಿ ಅವರ ಸಾರಥ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ ಎಂದು ಭಾವಿಸಿದ್ದಾರೆ.
ಇದಲ್ಲದೆ 2011ರ ಸಮಿಕರಣವನ್ನು ಕೂಡ ಅಭಿಮಾನಿಗಳು ಇಲ್ಲಿ ಉಲ್ಲೇಖ ಮಾಡುತ್ತಿದ್ದಾರೆ.
2011ರ ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಆಫ್ರಿಕಾ ವಿರುದ್ಧ ಸೋಲುಂಡಿತ್ತು.
ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ಸೋಲುಂಡಿತ್ತು. ಸೆಮೀಸ್ ರೇಸ್ ನಿಂದ ಆಸ್ಟ್ರೇಲಿಯಾ, ಸೌಥ್ ಆಫ್ರಿಕಾ ತಂಡಗಳು ನಿಷ್ಕ್ರಮಿಸಿದ್ದವು.
ಸೆಮೀಸ್ ನಲ್ಲಿ ನ್ಯೂಜಿಲೆಂಡ್, ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗಿದ್ದವು.
ಪ್ರಸ್ತುತ ಟಿ 20 ವಿಶ್ವಕಪ್ ನಲ್ಲೂ ಸೀನ್ ರಿಪೀಟ್ ಆಗುತ್ತಿದೆ.