ಮಾಜಿ ಕ್ರಿಕೆಟ್ ಆಟಗಾರ್ತಿ ಆಶ್ಲೇಘ್ ಬಾರ್ಟಿ 2021ರ ವಿಂಬಲ್ಡನ್ ಒಡತಿ…
ಆಶ್ಲೇಘ್ ಬಾರ್ಟಿ ಅವರು 2021ರ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಲ್ ಇಂಗ್ಲೆಂಡ್ ಟೆನಿಸ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಶ್ಲೆಘ್ ಬಾರ್ಟಿ ಅವರು 6-3, 6-7, 6-3ರಿಂದ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೊವಾ ಅವರನ್ನು ಪರಾಭವಗೊಳಿಸಿದ್ರು.
ವಿಶ್ವದ ನಂಬರ್ ವನ್ ಮಹಿಳಾ ಆಟಗಾರ್ತಿಯಾಗಿರುವ ಆಶ್ಲೇಘ್ ಬಾರ್ಟಿ ಎರಡನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, 41 ವರ್ಷಗಳ ಬಳಿಕ ಆಸ್ಟ್ರೇಲಿಯಾಗೆ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನೂ ದಕ್ಕಿಸಿಕೊಟ್ಟಿದ್ದಾರೆ. 1980ರಲ್ಲಿ ಎವೊನ್ ಗುಲಾಂಗೊಂಗ್ ಅವರು ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ಇದೀಗ ಆಶ್ಲೇಘ್ ಬಾರ್ಟಿ ಎವೋನ್ ಸಾಲಿಗೆ ಸೇರಿಕೊಂಡಿದ್ದಾರೆ.
2019ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದ ಆಶ್ಲೇಘ್ ಬಾರ್ಟಿ 2020ರ ಆಸ್ಟ್ರೇಲಿಯನ್ ಓಪನ್ ನಲ್ಲಿ ಸೆಮಿ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದರು. ಹಾಗೇ ಡಬಲ್ಸ್ ನಲ್ಲಿ 2013ರಲ್ಲಿ ವಿಂಬಲ್ಡನ್ ಹಾಗೂ 2018ರಲ್ಲಿ ಯುಎಸ್ ಓಪನ್ ಗೆದ್ದುಕೊಂಡಿದ್ದರು. ಹಾಗೇ 2013ರ ಆಸ್ಟ್ರೇಲಿಯನ್ ಓಪನ್ ಮತ್ತು 2017ರ ಫ್ರೆಂಚ್ ಓಪನ್ ನಲ್ಲಿ ರನ್ನರ್ ಅಪ್ ಗೆದ್ದುಕೊಂಡಿದ್ದರು.
1971ರಲ್ಲಿ ಎವೊನ್ ಗುಲಾಂಗೊಂಗ್ ಅವರು ಮೊದಲ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆದಾದ ಬಳಿಕ 1980ರಲ್ಲಿ ಎರಡನೇ ಬಾರಿ ವಿಂಬಲ್ಡನ್ ಪ್ರಸಸ್ತಿ ತನ್ನದಾಗಿಸಿಕೊಂಡಿದ್ದರು.
ಇದೀಗ ಆಶ್ಲೇಘ್ ಬಾರ್ಟಿ ಅವರು ಎವೋನ್ ಗುಲಾಂಗೋವ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಎವೋನ್ ಅವರು ನನ್ನ ಬದುಕಿನ ವಿಶೇಷ ವ್ಯಕ್ತಿ ಎವೋನ್ ನನಗೆ ಸ್ಪೂರ್ತಿಯಾಗಿದ್ದರು. ಎವೋನ್ ಆಸ್ಟ್ರೇಲಿಯಾ ಮಹಿಳಾ ಟೆನಿಸ್ ನ ಹೆಮ್ಮೆ ಮತ್ತು ಗೌರವದ ಪ್ರತಿಕ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಆಶ್ಲೇಘ್ ಬಾರ್ಟಿ ಭಾವುಕರಗಾಗಿ ಹೇಳಿದ್ದರು.
ಇನ್ನೊಂದು ವಿಶೇಷತೆ ಅಂದ್ರೆ ಆಶ್ಲೇಘ್ ಬಾರ್ಟಿ ಅವರು 10 ವರ್ಷಗಳ ಹಿಂದೆ ಅಂದ್ರೆ 2011ರಲ್ಲಿ ಇದೇ ಅಂಗಣದಲ್ಲಿ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದೀಗ ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಹಾಗೇ ನೋಡಿದ್ರೆ ಆಶ್ಲೇಘ್ ಬಾರ್ಟಿ ಅವರು ಆರಂಭದ ತನ್ನ ಕ್ರೀಡಾಬದುಕಿನಲ್ಲಿ ಕನ್ ಫ್ಯುಷನ್ ಮಾಡಿಕೊಂಡಿದ್ದರು. ಟೆನಿಸ್ ಕ್ರಿಕೆಟ್ ಅನ್ನೋ ಗೊಂದಲದಲ್ಲಿದ್ದರು. 2011ರ ಜೂನಿಯರ್ ವಿಂಬಲ್ಡನ್ ಗೆದ್ದ ನಂತರ ಆಶ್ಲೇಘ್ ಬಾರ್ಟಿ ಅವರು ಕ್ರಿಕೆಟ್ ಆಟದ ಕಡೆ ಒಲವು ಹರಿಸಿದ್ರು. ಅಲ್ಲದೆ ಆಸ್ಟ್ರೇಲಿಯಾ ಮಹಿಳಾ ಬಿಗ್ ಬ್ಯಾಷ್ ಟೂರ್ನಿಯಲ್ಲೂ ಮಿಂಚು ಹರಿಸಿದ್ದರು. ನಂತರ ಮತ್ತೆ ಟೆನಿಸ್ ಅಂಗಣದತ್ತ ಚಿತ್ತ ಹರಿಸಿದ್ರು. 2016ರ ನಂತರ ಟೆನಿಸ್ ಆಟವನ್ನು ಗಂಭೀರವಾಗಿ ಪರಿಗಣಿಸಿದ್ದ ಆಶ್ಲೇಘ್ ಬಾರ್ಟಿ ನೋಡ ನೋಡುತ್ತಲೇ ಅದ್ಭುತ ಆಟವನ್ನಾಡಿದ್ರು. ಜೊತೆಗೆ ತನ್ನ ಶ್ರೇಯಾಂಕವನ್ನು ಉತ್ತಮ ಪಡಿಸಿಕೊಂಡ್ರು. ಕಳೆದ ಮೂರು ನಾಲ್ಕು ವರ್ಷಗಳಿಂದ ಎರಡು ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಸೇರಿ ಒಟ್ಟು 12 ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಆಶ್ಲೇಘ್ ಬಾರ್ಟಿ ಮಹಿಳಾ ಟೆನಿಸ್ ರಂಗದ ನಂಬರ್ ವನ್ ಆಟಗಾರ್ತಿಯಾಗಿ ಪ್ರಜ್ವಲಿಸುತ್ತಿದ್ದಾರೆ.