ವಿಂಬಲ್ಡನ್ 2021- ಪೆಟ್ರಾ ಕ್ವಿಟೋವಾಗೆ ಆಘಾತ.. ಗಾರ್ಬಿನ್ ಮುಗುರುಝಾಗೆ ಸುಲಭ ಗೆಲುವು
ಮಾಜಿ ವಿಂಬಲ್ಡನ್ ಚಾಂಪಿಯನ್ ಸ್ಪೇನ್ ನ ಗಾರ್ಬಿನ್ ಮುಗುರುಝಾ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಗಾರ್ಬಿನ್ ಮುಗುರುಝಾ ಅವರು 6-0, 6-1ರಿಂದ ಫ್ರಾನ್ಸ್ ನ ಫಿಯೊನಾ ಫೆರೋ ಅವರನ್ನು ಸುಲಭವಾಗಿ ಮಣಿಸಿ ಮುನ್ನಡೆ ಸಾಧಿಸಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಅಮೆರಿಕಾದ ಸ್ಲೊಯಾನೆ ಸ್ಟೇಫೆನ್ಸ್ ಅವರು 6-3, 6-4ರಿಂದ ಪೆಟ್ರಾ ಕ್ವಿಟೋವಾ ಅವರನ್ನು ಪರಾಭವಗೊಳಿಸಿದ್ರು.
ಇನ್ನು ಎರಡನೇ ಶ್ರೇಯಾಂಕಿತೆ ಬಲರಾಸ್ ನ ಆರ್ಯಾನಾ ಸಬಾಲೆಂಕಾ ಅವರು 6-1, 6-4ರಿಂದ ರೊಮಾನಿಯಾ ಮೊನಿಕಾ ನಿಕ್ಯುಲೆಸ್ಕ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಹಾಗೇ 9ನೇ ಶ್ರೇಯಾಂಕಿತೆ ಪೋಲೆಂಡ್ ನ ಐಗಾ ಸ್ವಿಟೆಕ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ 6-4, 6-4ರಿಂದ ತೈವಾನ್ ನ ಹೇಶ್ ಸು ವೇಯ್ ಅವರನ್ನು ಸೋಲಿಸಿದ್ರು.