ವಿಂಬಲ್ಡನ್ 2021- ಪ್ರೀ ಕ್ವಾರ್ಟರ್ ಫೈನಲ್ ಗೆ ಎಂಟ್ರಿಯಾದ ನೊವಾಕ್ ಜಾಕೊವಿಕ್
ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ನಂಬರ್ ವನ್ ಆಟಗಾರ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-4, 6-3, 7-6ರಿಂದ ಅಮೆರಿಕಾದ ಡೆನಿಸ್ ಕ್ಯುಡ್ಲಾ ಅವರನ್ನು ಪರಾಭವಗೊಳಿಸಿದ್ರು.
ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಬ್ರಿಟನ್ ನ ಆಂಡಿ ಮುರ್ರೆ ಅವರು ಆಘಾತ ಅನುಭವಿಸಿದ್ದಾರೆ. ಆಂಡಿ ಮುರ್ರೆ 4-6, 2-6, 2-6ರಿಂದ ಸುಲಭವಾಗಿ ಡೆನಿಸ್ ಶಪೊವಾಲೊವ್ ವಿರುದ್ಧ ಸೋಲು ಅನುಭವಿಸಿದ್ರು.
ಇನ್ನು ಡಾನ್ ಇವಾನ್ಸ್ ಅವರು ಮೂರನೇ ಸುತ್ತಿನ ಪಂದ್ಯದಲ್ಲಿ 3-6, 6-3, 3-6, 4-6ರಿಂದ ಸೆಬಾಸ್ಟಿನ್ ಕಾರ್ಡಾ ವಿರುದ್ಧ ಪರಾಭವಗೊಂಡ್ರು.
ಹಾಗೇ ರಾಬರ್ಟ್ ಬೌಟಿಸ್ಟಾ 7-5, 6-1, 7-6ರಿಂದ ಡಾಮಿನಕ್ ಕೊಫೇರ್ ಅವರನ್ನು ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ರು.
ಇನ್ನುಳಿದಂತೆ ಕರೇನ್ ಹಚ್ನೊವಾ, ಆಂಡಿ ರುಬ್ಲೇವ್, ಮಾರ್ಟನ್ ಫ್ಯುಸೊವಿಕ್ಸ್ ಹಾಗೂ ಕ್ರಿಸಿಯಾನ್ ಗರೀನ್ ಅವರು ಮೂರನೇ ಸುತ್ತಿನಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡಿದ್ದಾರೆ.