ವಿಂಬಲ್ಡನ್ – ಮಹಿಳೆಯರ ಸಿಂಗಲ್ಸ್ ನಲ್ಲಿ ಮೂರನೇ ಸುತ್ತು ತಲುಪಿದ ಸಬಾಲೆಂಕಾ
ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಶ್ರೇಯಾಂಕಿತೆ ಆರ್ಯಾನಾ ಸಬಾಲೆಂಕಾ ಅವರು ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಸಬಾಲೆಂಕಾ ಅವರು ಪ್ರಯಾಸದ ಗೆಲುವು ಸಾಧಿಸಿದ್ರು. ಸಬಾಲೆಂಕಾ ಅವರಿಗೆ ಬ್ರಿಟನ್ ನ ಕಾಟಿಯಾ ಬೌಲ್ಟರ್ ಅವರು ತೀವ್ರ ಪೈಪೋಟಿಯನ್ನು ಒಡ್ಡಿದ್ದರು.
ಅಂತಿಮವಾಗಿ ಅನುಭವಿ ಆಟಗಾರ್ತಿಯಾಗಿರುವ ಸಬಾಲೆಂಕಾ 4-6, 6-3, 6-3ರಿಂದ ಕಾಟಿಯಾ ಬೌಲ್ಟರ್ ಅವರನ್ನು ಸೋಲಿಸಿದ್ರು.
ಇನ್ನು ವಿಶ್ವದ ಐದನೇ ಶ್ರೇಯಾಂಕಿತೆ ಎಲಿನಾ ಸ್ವಿಟೊಲಿನಾ ಅವರು ಕೂಡ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಎಲೆನಾ ಸ್ವಿಟೊಲಿನಾ ಅವರು 6-3, 2-6, 6-3ರಿಂದ ಬೆಲ್ಜಿಯಂನ ಆಲಿಸನ್ ವಾನ್ ಅವರನ್ನು ಸೋಲಿಸಿದ್ರು.
ಮಹಿಳೆಯರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕೆನಡಾದ ಬಿಯಾಂಕಾ ಆಂಡ್ರೆಸ್ಕ್ಯು ಅವರು 6-2, 6-1ರಿಂದ ಫ್ರೆಂಚ್ ನ ಆಲಿಝ್ ಕಾರ್ನೆಟ್ ಅವರಿಗೆ ತಲೆಬಾಗಿದ್ರು.








