ವಿಂಬಲ್ಡನ್ 2021- ಚೊಚ್ಚಲ ಪ್ರಶಸ್ತಿಗಾಗಿ ಬಾರ್ಟಿ ಮತ್ತು ಕರೊಲಿನಾ ಹೋರಾಟ..!

1 min read

ವಿಂಬಲ್ಡನ್ 2021- ಚೊಚ್ಚಲ ಪ್ರಶಸ್ತಿಗಾಗಿ ಬಾರ್ಟಿ ಮತ್ತು ಕರೊಲಿನಾ ಹೋರಾಟ..!

Ash Barty wimbledon saakshatvಅಗ್ರ ಶ್ರೇಯಾಂಕಿತೆ ಆಶ್ಲೇಘ್ ಬಾರ್ಟಿ ಮತ್ತು ಮಾಜಿ ನಂಬರ್ ವನ್ ಆಟಗಾರ್ತಿ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೊವಾ ಅವರು 2021ರ ವಿಂಬಲ್ಡನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಕರೊಲಿನಾ ಪ್ಲಿಸ್ಕೊವಾ ಅವರು 5-7, 6-4, 6-4ರಿಂದ ಬಲರಾಸ್ ನ ಆರ್ಯಾನ್ ಸಬಾಲೆಂಕಾ ಅವರನ್ನು ಪರಾಭವಗೊಳಿಸಿದ್ರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಆಶ್ಲೇಘ್ ಬಾರ್ಟಿ ಅವರು 6-3, 7-6 ರಿಂದ ಜರ್ಮನಿಯ ಆಂಜಲಿಕ್ ಕೆರ್ಬಾರ್ ಅವರನ್ನು ಸೋಲಿಸಿದ್ರು. ಈ ಮೂಲಕ 41 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಆಸ್ಟ್ರೇಲಿಯಾ ಆಟಗಾರ್ತಿ ಎಂಬ ಗೌರವಕ್ಕೂ ಪಾತ್ರರಾದ್ರು

ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಶ್ಲೇಘ್ ಬಾರ್ಟಿ ಮತ್ತು ಕರೊಲಿನಾ ಪ್ಲಿಸ್ಕೋವಾ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲಿದ್ದಾರೆ.
ಅಂದ ಹಾಗೇ ಕರೊಲಿನಾ ಪ್ಲಿಸ್ಕೋವಾ ಅವರಿಗೆ ಇದು ಚೊಚ್ಚಲ ವಿಂಬಲ್ಡನ್ ಫೈನಲ್. ಅಲ್ಲದೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ. 2019ರ ಆಸ್ಟ್ರೇಲಿಯನ್ ಓಪನ್ ಮತ್ತು 2017ರ ಫ್ರೆಂಚ್ ಓಪನ್ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದರು. ಹಾಗೇ 2016ರ ಯುಎಸ್ ಓಪನ್ ನಲ್ಲಿ ರನ್ನರ್ ಅಪ್ ಗೆದ್ದುಕೊಂಡಿದ್ದರು.
Karolina Pliskova wimbledon saakshatvಇನ್ನು ಆಶ್ಲೇಘ್ ಬಾರ್ಟಿ 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ರು. ಇನ್ನುಳಿದಂತೆ 2020ರ ಆಸ್ಟ್ರೇಲಿಯನ್ ನಲ್ಲಿ ಸೆಮಿ ಫೈನಲ್ ಹಾಗೂ 2018,2-10ರ ಯುಎಸ್ ಓಪನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ನಲ್ಲೇ ನಿರಾಸೆ ಅನುಭವಿಸಿದ್ದರು. ಇದೀಗ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd