ವಿಂಬಲ್ಡನ್ ರದ್ದು…! ಆದ್ರೆ ಸ್ಪರ್ಧಿಗಳಿಗೆ ಬಹುಮಾನದ ಮೊತ್ತ ಹಂಚಿದ ಆಲ್ ಇಂಗ್ಲೆಂಡ್ ಕ್ಲಬ್
ಕೊರೋನಾ ವೈರಸ್ನಿಂದಾಗಿ ಈ ಬಾರಿಯ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ ರದ್ದುಗೊಂಡಿದೆ. ವಿಂಬಲ್ಡನ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಟೂರ್ನಿಯು ರದ್ದುಗೊಂಡಿರುವುದು. 1945ರಿಂದ ಆರಂಭಗೊಂಡಿದ್ದ ವಿಂಬಲ್ಡನ್ ಟೂರ್ನಿಗೆ ತನ್ನದೇ ಆದ ಘನತೆ, ಗೌರವ ಇದೆ. ಇದೀಗ ಆಲ್ ಇಂಗ್ಲೆಂಡ್ ಕ್ಲಬ್ ವಿಂಬಲ್ಡನ್ ಟೂರ್ನಿಗೆ ಕಿಂಚಿತ್ತೂ ಘನತೆ ಕಮ್ಮಿಯಾಗದಂತೆ ನೋಡಿದೆ. ತನ್ನ ಪ್ರತಿಷ್ಠೆಯನ್ನೂ ಉಳಿಸಿಕೊಂಡಿದೆ.
ಹೌದು, ವಿಂಬಲ್ಡನ್ ಟೂರ್ನಿ ರದ್ದುಗೊಂಡ್ರೂ ಬಹುಮಾನದ ಮೊತ್ತವನ್ನು ಆಲ್ ಇಂಗ್ಲೆಂಡ್ ಕ್ಲಬ್ ನೀಡುತ್ತಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೂ ಬಹುಮಾನದ ಮೊತ್ತವನ್ನು ಹಂಚಿದೆ. ಇದು ವಿಂಬಲ್ಡನ್ ಟೂರ್ನಿಯ ಘನತೆಯನ್ನು ಹೆಚ್ಚಿಸಿದೆ ಅಂದ್ರೆ ತಪ್ಪಾಗಲ್ಲ.
ಅಂದ ಹಾಗೇ ವಿಂಬಲ್ಡನ್ ಟೂರ್ನಿಯಲ್ಲಿ ಒಟ್ಟು 620 ಆಟಗಾರರು ಭಾಗವಹಿಸುತ್ತಾರೆ. ಒಟ್ಟು 12.5 ಮಿಲಿಯನ್ ಡಾಲರ್ ಅನ್ನು ಆಟಗಾರರಿಗೆ ನೀಡಲಿದೆ. ಒಟ್ಟು 256 ಆಟಗಾರರು ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುತ್ತಾರೆ. ಇವರಿಗೆ ತಲಾ 31,000 ಡಾಲರ್ ನೀಡಲಾಗುವುದು. ಹಾಗೇ ಅರ್ಹತಾ ಸುತ್ತಿನಲ್ಲಿ 224 ಆಟಗಾರರು ಸ್ಪರ್ಧಿಸುತ್ತಿದ್ದು, ಇವರಿಗೆ 15,600 ಡಾಲರ್ ಅನ್ನು ನೀಡಲಾಗುವುದು ಎಂದು ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ನ ಅಧಿಕಾರಿಗಳು ತಿಳಿಸಿದ್ದಾರೆ.
ವಿಂಬಲ್ಡನ್ ಟೂರ್ನಿ ರದ್ದುಗೊಂಡ ಕೂಡಲೇ ನಾವು ವಿಂಬಲ್ಡನ್ ಟೂರ್ನಿ ನಡೆಯಲು ಕಾರಣರಾದವರಿಗೆ ಏನು ಕೊಡಬೇಕು ಎಂಬುದರ ಬಗ್ಗೆ ಯೋಚನೆ ಮಾಡಿದ್ದೇವು. ಅಲ್ಲದೆ ನಮ್ಮ ವಿಮಾ ಕಂಪೆನಿಯ ಜೊತೆ ಮಾತುಕತೆಯನ್ನು ನಡೆಸಿದ್ದೇವು. ಹೀಗಾಗಿ ಆಟಗಾರಿಗೆ ಬಹುಮಾನದ ಮೊತ್ತವನ್ನು ನೀಡಲು ಸಾಧ್ಯವಾಯ್ತು ಎಂದು ಆಲ್ ಇಂಗ್ಲೆಂಡ್ ಕ್ಲಬ್ನ ಮುಖ್ಯ ನಿರ್ದೇಶಕ ರಿಚರ್ಡ್ ಲೂಯಿಸ್ ಹೇಳಿದ್ದಾರೆ.
ಇನ್ನು ಟೂರ್ನಿಯಲ್ಲಿ 120 ಆಟಗಾರರು ಡಬಲ್ಸ್ ನಲ್ಲಿ ಸ್ಪರ್ಧಿಸುತ್ತಿದ್ದು ಇವರಿಗೆ ತಲಾ 7,800 ಡಾಲರ್ ಹಾಗೂ ವೀಲ್ ಚೇರ್ನಲ್ಲಿ ಭಾಗವಹಿಸುತ್ತಿರುವ 16 ಆಟಗಾರರಿಗೆ ತಲಾ 7,500 ಡಾಲರ್ ಮತ್ತು ಕ್ವಾಡ್ ವೀಲ್ ಚೇರ್ನ ನಾಲ್ವರು ಸ್ಪರ್ಧಿಗಳಿಗೆ ತಲಾ 6,200 ಡಾಲರ್ ನೀಡಲಾಗುತ್ತಿದೆ.