ವಿಂಡೀಸ್ ಆಲ್ ರೌಂಡರ್ ಆರ್ ಸಿಬಿ ಕ್ಯಾಪ್ಟನ್ RCB saaksha tv
2022ರ ಐಪಿಎಲ್ ಗಾಗಿ ಜನವರಿಯಲ್ಲಿ ಮೆಗಾ ಹರಾಜು ನಡೆಯಲಿದೆ. ಇದಕ್ಕಾಗಿ ಐಪಿಎಲ್ ನ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೈನ್ಡ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ, ಮ್ಯಾಕ್ಸ್ ವೆಲ್, ಮೊಹ್ಮದ್ ಸಿರಾಜ್ ಅವರನ್ನು ರಿಟೈನ್ಡ್ ಮಾಡಿಕೊಂಡಿದೆ.
ಈ ಮಧ್ಯೆ ಆರ್ ಬಿಸಿ ತಂಡದ ಬಗ್ಗೆ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಒಂದಿಷ್ಟು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ತಂಡದ ನಾಯಕ ಯಾರಾದ್ರೆ ಸೂಕ್ತ ಎಂದು ತಿಳಿಸಿದ್ದಾರೆ.
ಆಕಾಶ್ ಚೋಪ್ರಾ ಅವರ ಪ್ರಕಾರ, ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಜೇಸನ್ ಹೋಲ್ಡರ್ ಆರ್‍ಸಿಬಿ ನಾಯಕರಾಗಲು ಸೂಕ್ತ ಎಂದಿದ್ದಾರೆ. ಅಲ್ಲದೇ ಅವರ ಅಭಿಪ್ರಾಯಕ್ಕೆ ಒಂದಿಷ್ಟು ವಿವರಣೆಯನ್ನೂ ಕೂಡ ನೀಡಿದ್ದಾರೆ.
“ವಿಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿರುವ ಆಟಗಾರ.
ಹೋಲ್ಡರ್ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ತಂಡಕ್ಕೆ ನೆರವಾಗುತ್ತಾರೆ. ಜೊತೆಗೆ ಹಲವಾರು ತಂಡಗಳ ನಾಯಕತ್ವ ನಿಭಾಯಿಸಿದ ಅನುಭವಯೂ ಅವರಿಗಿದೆ.
ವಿಂಡೀಸ್ ನಾಡಲ್ಲಿ ನಡೆಯುವ ಟಿ 20 ಕ್ರಿಕೆಟ್ ಲೀಗ್ ಗಳಲ್ಲಿ ಹೋಲ್ಡರ್ ನಾಯಕರಾಗಿ ಯಶಸ್ಸು ಕಂಡಿದ್ದಾರೆ.
ಹೀಗಾಗಿ ಆರ್ ಸಿಬಿ ಮೆಗಾ ಹರಾಜಿನಲ್ಲಿ ಹೋಲ್ಡರ್ ಅವರನ್ನ ಖರೀದಿಸಿದರೇ ಒಳ್ಳೆಯದು ಎಂದು ತಿಳಿಸಿದ್ದಾರೆ.
ಇತ್ತ ವಿರಾಟ್ ಕೊಹ್ಲಿ ಆರ್ ಸಿಬಿಯ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಮ್ಯಾಕ್ಸ್ ವೆಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ಆರ್ ಸಿಬಿ ಫ್ರಾಂಚೈಸಿ ಭಾರತದ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಲು ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.









