ಕೊಹ್ಲಿ ನಾಯಕತ್ವದಿಂದಲೇ ಟೀಂ ಇಂಡಿಯಾ ಈ ಮಟ್ಟದಲ್ಲಿದೆ : ರೋಹಿತ್ Rohit saaksha tv
ಮುಂಬೈ : ವಿರಾಟ್ ಕೊಹ್ಲಿ ನಾಯಕತ್ವದಿಂದಲೇ ಟೀಂ ಇಂಡಿಯಾ ಈ ಮಟ್ಟದಲ್ಲಿದೆ ಎಂದು ಭಾರತದ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ, ವಿರಾಟ್ ನಾಯಕತ್ವವನ್ನು ಹಾಡಿಹೊಗಳಿದ್ದಾರೆ.
ಏಕದಿನ ನಾಯಕತ್ವವನ್ನು ಬಿಸಿಸಿಐ ವಿರಾಟ್ ಕೊಹ್ಲಿ ಅವರಿಂದ ಕಿತ್ತುಕೊಂಡು ರೋಹಿತ್ ಶರ್ಮಾಗೆ ವಹಿಸಿದ್ದು ಗೊತ್ತೇ ಇದೆ. ವಿರಾಟ್ ನೋ ಅಂದ್ರೂ ಬಿಸಿಸಿಐ ವಿ ಡೇಂಟ್ ಕೇರ್ ಎನ್ನತ್ತಾ ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಂಡಿದೆ ಅನ್ನೋ ಮಾತುಗಳು ಕ್ರಿಕೆಟ್ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಸಂಬಂಧ ಅಷ್ಟೊಂದು ಚೆನ್ನಾಗಿ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರದಾಡುತ್ತಿವೆ.
ಇದೀಗ ಈ ಬಗ್ಗೆ ಸ್ವತಃ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ಹೊರಗಿನವರು ಏನೂ ಮಾತನಾಡುತ್ತಿದ್ದಾರೆ ಅನ್ನೋದು ನಮಗೆ ಮುಖ್ಯವಲ್ಲ. ನಾವಿಬ್ಬರು ಏನೆಂದು ಕೊಂಡಿದ್ದೇವೆ ಮುಖ್ಯವಾಗಿದೆ. ಅಲ್ಲದೇ ನನಗೆ ವಿರಾಟ್ ಗೆ ಯಾವುದೇ ಭಿನ್ನಾಭಿಪ್ರಾಯಗಳಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲಷ್ಟೆ ಅಲ್ಲದೇ ವಿರಾಟ್ ಕೊಹ್ಲಿ ನಾಯಕತ್ವದಿಂದಲೇ ಟೀಂ ಇಂಡಿಯಾ ಈ ಮಟ್ಟದಲ್ಲಿದೆ ಎಂದು ಕೊಹ್ಲಿ ನಾಯಕತ್ವವನ್ನು ಹೊಗಳಿಸಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ರೋಹಿತ್ ಶರ್ಮಾಗೆ ಟಿ 20 ನಾಯಕತ್ವವನ್ನು ವಹಿಸಲಾಗಿತ್ತು. ಇದಾದ ಬಳಿಕ ಸೀಮಿತ ಓವರ್ ಗಳ ಕ್ರಿಕೆಟ್ ಗೆ ಒಬ್ಬರೇ ನಾಯಕರು ಇರಬೇಕು ಎಂದು ಏಕದಿನ ಕ್ರಿಕೆಟ್ ನ ನಾಯಕತ್ವವೂ ರೋಹಿತ್ ಗೆ ನೀಡಲಾಗಿದೆ.