ಇದು ನಾಚಿಕೆಗೇಡಿನ ಸಂಗತಿ : ಕೇಂದ್ರಕ್ಕೆ ಶಾಕ್ ಕೊಟ್ಟ ಕಂಗನಾ
ಮುಂಬೈ : ಮೂರು ಕೃಷಿ ಕಾನೂನುಗಳ ರದ್ದತಿ ಕುರಿತು ದೇಶಾದ್ಯಂತ ಹರ್ಷ ವ್ಯಕ್ತವಾಗುತ್ತಿದೆ. ಈ ಮಧ್ಯೆ ನಟಿ ಕಂಗನಾ ರಣಾವತ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೃಷಿ ಕಾನೂನಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸುತ್ತಿದ್ದಂತೆ ನಟಿ ಕಂಗನಾ ಟ್ವಿಟ್ಟರ್ ನಲ್ಲಿ ಬೇಸರ ಹೊರಹಾಕಿದ್ದಾರೆ. ಅಲ್ಲದೆ ಇದು ಸಂಪೂರ್ಣವಾಗಿ ಅನ್ಯಾಯ ಎಂದಿದ್ದಾರೆ.
ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು. ಈ ನಿರ್ಧಾರವನ್ನು ಪ್ರತಿಪಕ್ಷಗಳು ಮತ್ತು ರೈತ ಚಳವಳಿಗಾರರು ಸ್ವಾಗತಿಸಿದ್ದಾರೆ.
ಆದರೆ, ಕಂಗನಾ ರಣಾವತ್ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಹೋರಾಟದ ಫಲಿತಾಂಶವು ಶಕ್ತಿಶಾಲಿ ಎಂದು ಸಾಬೀತಾಗಿದೆ ಎಂದು ನೆಟಿಜನ್ ಪೆÇೀಸ್ಟ್ ಅನ್ನು ಹಂಚಿಕೊಂಡಿರುವ ಕಂಗನಾ, ಇದು ನಾಚಿಕೆಗೇಡಿನ ಸಂಗತಿ, ಸಂಪೂರ್ಣ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ ಸಂಸತ್ತಿನಲ್ಲಿ ಚುನಾಯಿತರಾದ ಸರ್ಕಾರದ ಬದಲು ಬೀದಿಗಿಳಿದು ಹೋರಾಟ ಮಾಡುವವರು ಕಾನೂನು ರೂಪಿಸಲು ಆರಂಭಿಸಿದರೆ ಇದು ಜಿಹಾದಿ ದೇಶವೇ ಎಂದು ಬರೆದುಕೊಂಡಿದ್ದಾರೆ.