WIvsIND : ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆ WIvsIND India have won the toss and have opted to bat
ಅಹಮದಾಬಾದ್ : ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಇಂದು ಇಂಡೋ – ವಿಂಡೀಸ್ ನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ನಾಯಕ ರೋಹಿತ್ ಶರ್ಮಾ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿದ್ದಾರೆ. ಉಪ ನಾಯಕ ಕೆ.ಎಲ್.ರಾಹುಲ್, ದೀಪಕ್ ಹೂಡಾ, ಚಹಾಲ್, ಶರ್ದೂಲ್ ಗೆ ಕೋಕ್ ನೀಡಲಾಗಿದೆ.
ಇವರ ಬದಲಿಗೆ ಶ್ರೇಯಸ್ ಅಯ್ಯರ್, ಶಿಖರ್ ಧವನ್. ದೀಪಕ್ ಚಹಾರ್, ಕುಲ್ ದೀಪ್ ಯಾದವ್ ಗೆ ಅವಕಾಶ ನೀಡಲಾಗಿದೆ.
ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಅಕೇಲ್ ಹೊಸೈನ್ ಬದಲಿಗೆ ಹೇಡನ್ ವಾಲ್ಷ್ ಗೆ ಚಾನ್ಸ್ ನೀಡಲಾಗಿದೆ.
ತಂಡಗಳು ಹೀಗಿವೆ.
ಭಾರತ : ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ವಾಷಿಂಗ್ ಟನ್ ಸುಂದರ್, ದೀಪಕ್ ಚಹಾರ್, ಕುಲ್ ದೀಪ್ ಯಾದವ್, ಮೊಹ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ವೆಸ್ಟ್ ಇಂಡೀಸ್ : ಶಾಯ್ ಹೋಪ್(ಡಬ್ಲ್ಯೂ), ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್(ಸಿ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಹೇಡನ್ ವಾಲ್ಷ್, ಕೆಮರ್ ರೋಚ್