WIvsIND ODI | 1000ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ
ಟೀಮ್ ಇಂಡಿಯಾ ತನ್ನ 1000ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದ್ದಾರೆ.
ಭಾರತದ ಪರ ರೋಹಿತ್ ಶರ್ಮಾ ಜೊತೆ ಯುವ ಬ್ಯಾಟರ್ ಇಶಾನ್ ಕಿಶಾನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಆಲ್ ರೌಂಡರ್ ದೀಪಕ್ ಹೂಡ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.
ತಂಡಗಳು ಹೀಗಿವೆ :
ಭಾರತ ತಂಡ : ರೋಹಿತ್ ಶರ್ಮಾ, ಇಶಾನ್ ಕಿಶಾನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ ಟನ್ ಸುಂದರ್, ಶರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಮೊಹ್ಮದ್ ಸಿರಾಜ್
ವೆಸ್ಟ್ ಇಂಡೀಸ್ : ಬ್ರಾಂಡನ್ ಕಿಂಗ್, ಶಾಯ್ ಹೋಪ್(w), ಶಮರ್ಹ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರನ್, ಕೀರಾನ್ ಪೊಲಾರ್ಡ್(ಸಿ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಅಕೇಲ್ ಹೊಸೈನ್