WIvsIND : ವಿಂಡೀಸ್ ಗೆ 238 ರನ್ ಟಾರ್ಗೆಟ್ wivsind-TeamIndia post 237 on the board in the 2nd ODI saaksha tv
ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ 238 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ 8 ರನ್ ಗಳಿಗೆ ಔಟ್ ಆದರು.
ಇದಾದ ಬಳಿಕ ರಿಷಬ್ ಪಂತ್, ವಿರಾಟ್ ಕೊಹ್ಲಿ ಕೊಂಚ ಚೇತರಿಕೆಯ ಆಟವಾಡಿದ್ರೂ 18 ರನ್ ಗಳಿಸಿದ್ದಾಗ ಪಂತ್ ಮತ್ತು ವಿರಾಟ್ ಕೊಹ್ಲಿ ಸ್ಮಿತ್ ಗೆ ವಿಕೆಟ್ ಒಪ್ಪಿಸಿದರು.
ಈ ಸಂಕಷ್ಟದ ಸ್ಥಿತಿಯಲ್ಲಿ ಟೀಂ ಇಂಡಿಯಾ ಉಪ ನಾಯಕ ಕೆ.ಎಲ್.ರಾಹುಲ್, ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಆಸರೆಯಾದರು.
ಈ ಇಬ್ಬರು ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದ್ರು. ಜೊತೆಗೆ 90 ರನ್ ಗಳ ಜೊತೆಯಾಟವಾಡಿದ್ರು.
ಈ ವೇಳೆ 49 ರನ್ ಗಳಿಗೆ ರಾಹುಲ್ ರನೌಟ್ ಆದರು. ಬಳಿಕ ವಾಷಿಂಗ್ ಟನ್ ಸುಂದರ್ ಜೊತೆಗೂಡಿ ಸೂರ್ಯ ಅರ್ಧಶತಕ ಸಂಭ್ರಮ ಆಚರಿಸಿಕೊಂಡರು.
ಸೂರ್ಯ ಆಟ 64ಕ್ಕೆ ಕೊನೆಯಾಯ್ತು. ಇದಾದ ನಂತರ ಸುಂದರ್ 24 ರನ್, ದೀಪಕ್ ಹೂಡಾ 29 ರನ್, ಶಾರ್ದೂಲ್ 8 ರನ್ ಗಳಿಸಿದರು.
ಅಂತಮವಾಗಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿದೆ.









