ಸಾಲದ ಬಡ್ಡಿ ಕಟ್ಟಲಾರದೇ ಮಹಿಳೆ ಆತ್ಮಹತ್ಯೆ kolar saaksha tv
ಕೋಲಾರ : ಸಾಲಗಾರರ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಿ ದೇವಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.
ಬಡ್ಡಿ ದಂಧೆ ನಡೆಸುತ್ತಿದ್ದ ವೀಣಾ ವೆಂಕಟೇಶ್ ಅವರಿಂದ ಲಕ್ಷ್ಮಿದೇವಮ್ಮ ಸಾಲ ಪಡೆದಿದ್ದು, ಬಡ್ಡಿ ಕಟ್ಟುವಂತೆ ವೀಣಾ ವೆಂಕಟೇಶ್ ಕಿರುಕುಳ ನೀಡುತ್ತಿದ್ದರಂತೆ.
ಇದರಿಂದ ರೋಸಿ ಹೋದ ಲಕ್ಷ್ಮದೇವಮ್ಮ, ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇತ್ತ ವಿಡಿಯೋ ಸಮೇತ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಮೃತ್ತ ಮಹಿಳೆ ಸಂಬಂಧಿಕರು ದೂರು ನೀಡಿದ್ದಾರೆ.
ಬಡ್ಡಿ ದಂಧೆ ನಡೆಸುತ್ತಿದ್ದ ವೀಣಾ ವೆಂಕಟೇಶ್, ಅರುಣ್, ಲಕ್ಷ್ಮಿ ಎಂಬ ಮೂವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.









