ಗಂಡ, ಹೆಂಡತಿಯರ ಜಗಳದ ನಡುವೆ ಮಗು ಅನಾಥವಾಯಿತು
ಆಂದ್ರಪ್ರದೇಶ: ಪತ್ನಿಯೊಬ್ಬಳು ಗಂಡನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮದ್ದಿಪಾಡು ತಾಲೂಕಿನ ಗಾಜುಲಪಾಲೇಯಲ್ಲಿ ನಡೆದಿದೆ. .
ಕ್ರಿಷ್ಟಿಪಾಟಿ ಕೃಷ್ಣರೆಡ್ಡಿ (31) ಮೃತದುರ್ದೈವಿ. ಈಗ ತಂದೆ ಸಾವನ್ನಪ್ಪಿದ್ದು, ತಾಯಿ ಜೈಲು ಪಾಲಾದರೇ ಐದು ವರ್ಷದ ಮಗು ಅನಾಥವಾಗಿದೆ.
ಕ್ರಿಷ್ಟಿಪಾಟಿ ಕೃಷ್ಣರೆಡ್ಡಿ ಸಂತನೂತಲಪಾಡು ನಿವಾಸಿ ರುಕ್ಮಿಣಿ 2011ರಲ್ಲಿ ಮದುವೆಯಾಗಿದ್ದರು. ದಂಪತಿಗಳು ಪ್ರೇಮ ವಿವಾಹವಾಗಿದ್ದಾರೆ. ಇವರಿಬ್ಬರಿಗೆ ಐದು ವರ್ಷದ ಮುದ್ದಾದ ಮಗನಿದ್ದು, ಸಂತನೂತಲಪಾಡು ಗ್ರಾಮದಲ್ಲಿ ವಾಸವಾಗಿದ್ದರು.
ಸುಖವಾಗಿ ಜೀವನ ಸಾಗುತ್ತಿದ್ದ, ಸಂಸಾರದಲ್ಲಿ ಉಳಿ ಹಿಂಡಿದಂತೆ ಗಂಡ ಕ್ರಿಷ್ಟಿಪಾಟಿ ಕೃಷ್ಣರೆಡ್ಡಿ ಸಾರಾಯಿ ಚಟಕ್ಕೆ ಬಿದ್ದಿದ್ದಾನೆ. ಹೆಂಡದ ಹಿಂದೆ ಬಿದ್ದ ಗಂಡ ಹಲವಾರು ವರ್ಷಗಳಿಂದ ಹೆಂಡತಿಗೆ ಕಿರುಕುಳ ನೀಡುತ್ತಾ ಬಂದಿದ್ದಾನೆ. ಕಳೆದ ಮೂರು ದಿನಗಳ ಹಿಂದಿನಿಂದಲೂ ಕೃಷ್ಣಾರೆಡ್ಡಿ ತನ್ನ ಹೆಂಡತಿ ರುಕ್ಮಿಣಿಗೆ ಶಾರೀರಿಕವಾಗಿ ಚಿತ್ರಹಿಂಸೆ ನೀಡುತ್ತಾ ಬಂದಿದ್ದಾನೆ. ಹೀಗಾಗಿ, ಇಬ್ಬರ ಮಧ್ಯೆ ಜಗಳ ಹೆಚ್ಚಾಗ ತೊಡಗಿತು.
ಸೋಮವಾರ ಸಂಜೆ ಕುಡಿದು ಬಂದು ತನ್ನ ಹೆಂಡತಿಯೊಂದಿಗೆ ಕೃಷ್ಣಾರೆಡ್ಡಿ ಜಗಳವಾಡಿದ್ದಾನೆ. ಈ ವೇಳೆ ಕೋಪಗೊಂಡ ರುಕ್ಮಿಣಿ ತನ್ನ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮನೆಯ ಚಿಲಕ ಹಾಕಿ ಹೊರಗೆ ಓಡಿ ಬಂದಿದ್ದಾಳೆ. ನಂತರ ಆ ಶರೀರ ಸಂಪೂರ್ಣ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಬಳಿಕ ಆರೋಪಿಯನ್ನು ಬಂಧಿಸಿದರು. ಈ ಘಟನೆ ಕುರಿತು ಮೃತನ ಸಹೋದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.








