8 ವರ್ಷಗಳ ಡೇಟಿಂಗ್ ನಂತರವೂ ವಿವಾಹಕ್ಕೆ ಒಪ್ಪದ ಗೆಳೆಯ – ನ್ಯಾಯಾಲಯದ ಕದ ತಟ್ಟಿದ ಮಹಿಳೆ
ಜಾಂಬಿಯಾ, ಡಿಸೆಂಬರ್11: ಅನೇಕ ಜನರಿಗೆ, ಮದುವೆಯಾಗುವುದೇ ಜೀವನದ ಅಂತಿಮ ಗುರಿಯಲ್ಲ ಮತ್ತು ಅವರು ಆ ವಿಷಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಪ್ರೀತಿಸುವ ವ್ಯಕ್ತಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ ನಂತರ, ವಿವಾಹವು ಮುಂದಿನ ಹಂತ ಎಂದು ಭಾವಿಸುವವರು ಸಹ ಇದ್ದಾರೆ. ಜಾಂಬಿಯಾದ ಮಹಿಳೆಯೊಬ್ಬಳು ತನ್ನ ಗೆಳೆಯನ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದು, 8 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಳು.

8 ವರ್ಷ ಒಟ್ಟಿಗೆ ಕಳೆದ ನಂತರವೂ, ಗೆರ್ಟ್ರೂಡ್ ನ್ಗೋಮಾ ಎಂಬ ಮಹಿಳೆ ತನ್ನ ಸಂಗಾತಿ ಹರ್ಬರ್ಟ್ ಸಲಾಲಿಕಿ ವಿವಾಹದ ಬಗ್ಗೆ ಯೋಚಿಸದ ಕಾರಣ ನಿರಾಶೆಗೊಂಡಳು ಮತ್ತು ಅವಳು ಆತನನ್ನು ಮದುವೆಯಾಗುವಂತೆ ಕೇಳಿಕೊಂಡಳು.
ಆದರೆ ಆತ ಇದಕ್ಕೆ ನಿರಾಕರಿಸಿದಾಗ ಕೋಪಗೊಂಡ ಆಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದಳು. ಅವನು ತನ್ನ ಮದುವೆಯನ್ನು ಪ್ರಸ್ತಾಪಿಸದೆ ಸುಮಾರು ಒಂದು ದಶಕದಿಂದ ತನ್ನ ಸಮಯವನ್ನು ವ್ಯರ್ಥ ಮಾಡಿದನೆಂದು ಆರೋಪಿಸಿದಳು.
ತನ್ನ ಮಗುವಿನ ತಂದೆಯಾದ ಸಲಾಲಿಕಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಆದರೆ ಈಗ ಆತ ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾನೆ ಎಂದು ಎನ್ಗೋಮಾ ಹೇಳಿದಳು. ಅಷ್ಟೇ ಅಲ್ಲ, ಹರ್ಬರ್ಟ್ ತನ್ನನ್ನು ಮೋಸ ಮಾಡುತ್ತಿದ್ದಾನೆ ಎಂದು ಅವಳು ಅನುಮಾನಿಸಿದಳು.
ಯಾರೂ ಬೇಡ ಎಂದು ಎಲ್ಲರನ್ನೂ ಹೊರಗೆ ಅಟ್ಟಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ !
ಅವನು ಎಂದಿಗೂ ಮದುವೆಯ ವಿಷಯದಲ್ಲಿ ಗಂಭೀರವಾಗಿರಲಿಲ್ಲ. ಮುಂದಿನ ದಾರಿ ಮತ್ತು ನಮ್ಮ ಭವಿಷ್ಯವನ್ನು ತಿಳಿಯಲು ನಾನು ಅರ್ಹಳಾಗಿದ್ದು, ಅದಕ್ಕಾಗಿಯೇ ನಾನು ಆತನನ್ನು ನ್ಯಾಯಾಲಯಕ್ಕೆ ಎಳೆದೆ ಎಂದು ಆಕೆ ಕೀನ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದಳು.
ಸಲಾಲಿಕಿ ವರದಕ್ಷಿಣೆಯನ್ನು ಸಹ ಪಡೆದಿದ್ದಾನೆ, ಆದರೆ ಇದೀಗ ಆತ ಮದುವೆಯಾಗಲು ಆರ್ಥಿಕವಾಗಿ ಸದೃಢನಾಗಿಲ್ಲ ಎಂದು ಹೇಳುತ್ತಿರುವುದಾಗಿ ಆಕೆ ಆರೋಪಿಸಿದಳು.
ಏತನ್ಮಧ್ಯೆ, ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ, ಎನ್ಗೋಮಾ ತನಗೆ ಅಗತ್ಯವಾದ ಗಮನವನ್ನು ನೀಡುತ್ತಿಲ್ಲ ಎಂದು ಹರ್ಬರ್ಟ್ ಆರೋಪಿಸಿದ್ದಾನೆ.

ಆದರೆ, ಪ್ರಕರಣದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು, ಈ ಪ್ರಕರಣದಲ್ಲಿ ನ್ಯಾಯಾಲಯವು ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ನೀವು ಕಾನೂನುಬದ್ಧವಾಗಿ ಮದುವೆಯಾಗಿಲ್ಲ. ನಿಮ್ಮ ಭಿನ್ನಾಭಿಪ್ರಾಯಗಳನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಲು ಪ್ರಯತ್ನಿಸುವಂತೆ ಸೂಚಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336718546223521793?s=19
https://twitter.com/SaakshaTv/status/1337086157931212800?s=19








