ವರ್ಷದೊಳಗೆ ಮೊಮ್ಮಗು ಕೊಡಿ, ಇಲ್ಲವೇ 5 ಕೋಟಿ ಪರಿಹಾರ ನೀಡಿ –  ಮಗ ಸೊಸೆ ವಿರುದ್ಧ  ಪೋಷಕರ ದೂರು

1 min read

ವರ್ಷದೊಳಗೆ ಮೊಮ್ಮಗು ಕೊಡಿ, ಇಲ್ಲವೇ 5 ಕೋಟಿ ಪರಿಹಾರ ನೀಡಿ –  ಮಗ ಸೊಸೆ ವಿರುದ್ಧ  ಪೋಷಕರ ದೂರು

ಮಗ ಮತ್ತು ಸೊಸೆ ಮೊಮ್ಮಗುವನ್ನು ಕೊಟ್ಟಿಲ್ಲ ಎಂದು ಬೇಸರಕ್ಕೆ ಒಳಗಾದ ಮಗನ ಅಪ್ಪ ಅಮ್ಮ ಕೋರ್ಟ್‌ಗೆ ಮೊರೆ ಹೋದ ಘಟನೆ ಹರಿದ್ವಾರದಲ್ಲಿ ನಡೆದಿದೆ.

ಒಂದು ವರ್ಷದ ಒಳಗೆ ನಮಗೆ ಮೊಮ್ಮಗುವನ್ನು ಕೊಡಬೇಕು ಅಥವಾ 5 ಕೋಟಿ ಪರಿಹಾರವನ್ನು ನೀಡಬೇಕು’ ಎಂದು ಮಗ ಮತ್ತು ಸೊಸೆ ವಿರುದ್ಧ  ಹರಿದ್ವಾರ ನಿವಾಸಿಗಳಾದ ಎಸ್ ಆರ್ ಪ್ರಸಾದ್ ಮತ್ತು ಪತ್ನಿ ಸಿವಿಲ್‌ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

 

ಕಷ್ಟಪಟ್ಟು ಮಗನನ್ನು ಅಮೆರಿಕಾದಲ್ಲಿ  ಓದಿಸಿದ್ದೇವೆ. ವಿದೇಶದಲ್ಲಿ ತರಬೇತಿ ಕೊಡಿಸಿ ಪೈಲೆಟ್‌ ಮಾಡಿಸಿದ್ದೇವೆ. ಮದುವೆಯನ್ನೂ ಮಾಡಿಸಿದ್ದೇವೆ. ಥೈಲೆಂಡ್‌ಗೆ ಹನಿಮೂನ್‌ ಕೂಡ ಕಳುಹಿಸಿಕೊಟ್ಟಿದ್ದೇವೆ. ಆದರೆ ಮದುವೆಯಾದ ಬಳಿಕ ಪತ್ನಿಯ ಮಾತು ಕೇಳಿಕೊಂಡು ಮಗ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದಾನೆ.

 

ಮಗ ನಮ್ಮೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇಲ್ಲ.  ಸ್ವಂತ ಮನೆಗಾಗಿ ಸಾಲ ಮಾಡಿದ್ದೇವೆ. ನಮ್ಮೆಲ್ಲ ಆಸ್ತಿ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ನಮಗೆ ಒಂದು ವರ್ಷದೊಳಗೆ ಮೊಮ್ಮಗು ಅಥವಾ ಮೊಮ್ಮಗಳು ಬೇಕು, ಇಲ್ಲದಿದ್ದರೆ ಮಗ ಮತ್ತು ಸೊಸೆ ತಲಾ  2.5 ರೂ ಕೋಟಿ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd