ಸಹನೆಯಲ್ಲಿ ಸಾಗರವಾಗಿ
ಸಿಟ್ಟು ಬಂದರೆ ಉಕ್ಕುವ ಪ್ರವಾಹವಾಗಿ ಹೆಣ್ಣು
ಸಹನೆಯಲ್ಲಿ ಸಾಗರವಾಗಿ
ತ್ಯಾಗದಲ್ಲಿ ಭೂತಾಯಿಯಾಗಿ
ಮಮತೆಯಲ್ಲಿ ಮಂದಾರವಾಗಿ
ನುಡಿಯಲ್ಲಿ ಅಮೃತವಾಣಿಯಾಗಿ
ವಿನಯದಲ್ಲಿ ವಿವೇಕವಾಗಿ
ವಿದ್ಯೆಯಲ್ಲಿ ವಿಷ್ಣುವಾಗಿ
ಬದುಕು ಎಂಬ ಜ್ಞಾನದಲ್ಲಿ ಗ್ರಂಥಾಲಯವಾಗಿ
ಮನೆಯಲ್ಲಿ ತುಳಸಿಯಾಗಿ
ಪ್ರಪಂಚಕ್ಕೆ ಮಾದರಿಯಾಗಿ
ಗಂಡುಜಾತಿಗೆ ವರವಾಗಿ
ಪ್ರೇಮದಲ್ಲಿ ಸಾಗರವಾಗಿ
ನಗುವಲ್ಲಿ ಅರಳುವ ಹೂವಾಗಿ
ಮನಸ್ಸಿನಲ್ಲಿ ಮಗುವಾಗಿ
ತಾಯಿಯಲ್ಲಿ ದೇವರಾಗಿ
ಅಕ್ಕರೆಯಲ್ಲಿ ಸಕ್ಕರೆಯಾಗಿ
ಜ್ಞಾನದಲ್ಲಿ ಬೆಳಗುವ ಜ್ಯೋತಿಯಾಗಿ
ನುಡಿಯಲ್ಲಿ ನಡೆಯಾಗಿ
ಮೂಕಳಾಗಿ ಈ ಜಗದೋಳು ಜ್ವಾಕೆಯಾಗಿ
ಭಾವನೆಗೆ ಭದ್ದಳಾಗಿ ಕ್ಷಮೆಯಲ್ಲಿ ಧರ್ಮರಾಯನಾಗಿ
ಧೈರ್ಯದಲ್ಲಿ ಅರ್ಜುನನಾಗಿ
ಶಕ್ತಿಯುಕ್ತಿಯಲ್ಲಿ ಹನುಮನಾಗಿ
ವಾತ್ಸಲ್ಯದಲ್ಲಿ ಲಕ್ಷಮಣನಾಗಿ
ಸಂಸಾರದಲ್ಲಿ ಸೀತೆಯಾಗಿ
ಕಲೆಯಲ್ಲಿ ಕಾಳಿದಾಸನಾಗಿ
ಎಲ್ಲಾ ರಂಗಗಳಲ್ಲಿಯೂ ಮೀನುಗುವ ನಕ್ಷತ್ರವಾಗಿ
ಪ್ರಪಂಚದ ಪೃಥ್ವಿಯಾಗಿ
ಎಲ್ಲರೊಳಗೊಂದಾಗಿ
ಸಂಸಾರದಲ್ಲಿಯೂ ಸೈ
ಸಂವಿಧಾನದಲ್ಲಿಯೂ ಸೈ
ಕೊನೆಗೆ ತಾನು ತಾನಾಗಿ ಉಳಿಯುವವಳೆ
ಹೆಣ್ಣು