ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ  ಮಹಾತಾಯಿ

1 min read

ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದ  ಮಹಾತಾಯಿ

ಮೊದಲೇ ಅವಳಿ ಜವಳಿ ಮಕ್ಕಳಿಗೆ ತಾಯಿಯಾಗಿದ್ದ ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬರು ಇದೀಗ  ಒಂದೇ ಬಾರಿಗೆ ಒಟ್ಟು 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ಬರೆದಿದ್ದಾರೆ.   37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ 7 ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಈ ಮುನ್ನ ಗೋಸಿಯಮ್ ತಮಾರಾ ಸಿಥೋಲ್ ಗರ್ಭಿಣಿಯಾಗಿದ್ದಾಗ ಸ್ವಾಭಾವಿಕ ಹೆರಿಗೆಯಾಗಿತ್ತು. ಆದರೆ ಚಿಕಿತ್ಸೆಯ ಪರಿಣಾಮ ಮಹಿಳೆ ಇಷ್ಟು ಭ್ರೂಣಗಳಿಗೆ ಗರ್ಭಧರಿಸಿದ್ದಾರೆ ಎನ್ನಲಾಗಿದೆ.  ಈ ಮುನ್ನ ಮೊರೊಕ್ಕೊದ ಆಸ್ಪತ್ರೆಯಲ್ಲಿ ಮಾಲಿಮನ್ ಮಹಿಳೆ-ಹಲೀಮಾ ಸಿಸ್ಸೆ 9 ಮ್ಕಕಳಿಗೆ ಜನ್ಮ ನೀಡಿದ್ದರು. ಇದಕ್ಕೆ ಆಕೆ ಪಡೆದ ಚಿಕಿತ್ಸೆ ಕಾರಣ ಎಂದು ಹೇಳಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.

ಕೊರೊನ ಮಹಾಮಾರಿ:

ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

ಜನ ನಿಬಿಡ ಪ್ರದೇಶದಿಂದ ದೂರವಿರಿ.

ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd