ಗಂಡನನ್ನ ಬಿಟ್ಟು ತವರು ಸೇರಿದ್ದ ಯುವತಿಗೆ ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟ ಕುಟುಂಬಸ್ಥರು

1 min read

ಗಂಡನನ್ನ ಬಿಟ್ಟು ತವರು ಸೇರಿದ್ದ ಯುವತಿಗೆ ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟ ಕುಟುಂಬಸ್ಥರು

19 ವರ್ಷದ ವಿವಾಹಿತೆಯೊಬ್ಬಳು ತನ್ನ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದರಿಂದ ಆಕೆಯ ಮನೆಯರೇ  ಸಾರ್ವಜನಿಕರ ಎದುರಲ್ಲೇ ಆಕೆಯನ್ನ ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಹೊಡೆದು , ಬಾಯಿಗೆ ಬಂದ ಹಾಗೆ ಬೈದು ವಿಕೃತಿ ಮೆರೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..

ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಂಬಂಧ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ  ಹರಿದಾಡ್ತಿದ್ದು, ನೆಟ್ಟಿಗರನ್ನ ಕೆರಳಿಸಿದೆ. ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಈಕೆ ಪತಿಯ ಮನೆಯನ್ನ ತ್ಯಜಿಸಿ ಬಂದಿದ್ದಳು ಎನ್ನಲಾಗಿದೆ.

ಕರ್ಮ : ಮರಕ್ಕೆ ನಿರಂತರವಾಗಿ ಒದ್ದ – ಮುಂದಾಗಿದ್ದು ಅನಾಹುತ – VIDEO VIRAL 

ಹಲ್ಲೆಕೋರರೇ ಈ ವಿಡಿಯೋವನ್ನ ರೆಕಾರ್ಡ್​ ಮಾಡಿದ್ದು ಇದರಲ್ಲಿ ಓರ್ವ, ಅಳೋದನ್ನ ನಿಲ್ಲಿಸು, ಇನ್ಮುಂದೆ ಹೀಗೆ ವಾಪಸ್​ ಬರ್ತೀಯಾಎಂದು ಕೇಳಿದ್ದಾನೆ.. ಇನ್ನೊಬ್ಬ ಆಕೆಗೆ ಕೋಲಿನಿಂದ ನಿರಂತರವಾಗಿ ಬಾರಿಸಿದ್ದಾನೆ. ಅಲ್ಲದೇ ಆಕೆ ಚಿತ್ರಹಿಂಸೆ ಪಡುವುದನ್ನ ನೋಡಿ ನಕ್ಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ..

ಜೂನ್ 28ರಂದು ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರಕರಣ ವೈರಲ್​ ಆಗಿದೆ.. ಇದು  ಪೊಲೀಸರ ಗಮನಕ್ಕೂ ಬಂದಿದ್ದು, ತನಿಖೆ ಕೈಗೆತ್ತಿಕೊಂಡು ಸಂತ್ರಸ್ತ ಯುವತಿಯನ್ನ ವಿಚಾರಣೆ ನಡೆಸಿದ್ದಾರೆ.. ಆಕೆ ಕೊಟ್ಟ ಹೇಳಿಕೆ ಆಧರಿಸಿ  ಪ್ರಕರಣ ದಾಖಲಿಸಿಕೊಂಡು ಆಕೆಯ ತಂದೆ ಹಾಗೂ ಸೋಹೋದರರನ್ನ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd