ಮಾಂತ್ರಿಕನ ಮಾತು ಕೇಳಿ ನೀಚ ಕೆಲಸ ಮಾಡಿದ ಕಿರಾತಕಿ… 3 ವರ್ಷದ ಪುಟ್ಟ ಕಂದಮ್ಮನ ಕೊಲೆ..!
ಉತ್ತರಪ್ರದೇಶ : ಸಾಮಾನ್ಯವಾಗಿ ಜನರು ತಮಗೆ ಕಷ್ಟ ಬಂದಾಗ. ಮಕ್ಕಳಾಗದೇ ಹೋದಾಗ ಹುಡುಕುವ ದಾರಿ ಮಾಟ ಮಂತ್ರ. ಇಂತಹ ಮೂಡನಂಬಿಕೆಗಳಿಗೆ ಕಟ್ಟುಬಿದ್ದು, ಅನೇಕ ಅಪರಾಧಗಳನ್ನ ಮಾಡಿರುವ ಪ್ರಕರಣಗಳನ್ನನೋಡಿದ್ದೇವೆ.
ಅದರಂತೆ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬಳು ತನಗೆ ಮಕ್ಕಳಾಗದ ಹಿನ್ನೆಲೆ ಮಾಂತ್ರಿಕನ ಬಳಿ ಸಹಾಯ ಕೇಳಿದ್ದಾಳೆ. ಆತನ ಮಾತು ಕೇಳಿ ಪಕ್ಕದ ಮನೆಯ 3 ವರ್ಷದ ಪುಟ್ಟ ಕಂದಮ್ಮನನ್ನ ಬಲಿಕೊಟ್ಟಿದ್ದಾಳೆ. ಹೌದು ಮಕ್ಕಳಾಗದ ಮಹಿಳೆ ಪಕ್ಕದ ಮನೆಯ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯಿ ನಗರದಲ್ಲಿ ನಡೆದಿದೆ.
25 ವರ್ಷದ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಮಗುವನ್ನು ಬಲಿಕೊಟ್ಟರೆ ತಾನು ಗರ್ಭಿಣಿಯಾಗುತ್ತೇನೆ ಎಂದು ಮಾಂತ್ರಿಕನ ಮಾತು ನಂಬಿ ಈ ರೀತಿ ಮಾಡಿದ್ದಾಗಿ ಮಹಿಳೆ ಒಪ್ಪಿಕೊಂಡಿದ್ದಾಲೆ. ಆಕಾಶ್ ಎಂಬ ಮಗುವನ್ನು ಮನೆಯ ಟೆರಸ್ ಮೇಲೆ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಕೊಂದು ಬ್ಯಾಗ್ ಒಂದರಲ್ಲಿ ತುಂಬಿ ಇಟ್ಟಿದ್ದಾಳೆ. ಮಗು ನಾಪತ್ತೆಯಾಗಿದ್ದರಿಂದ ಗಾಬರಿಯಲ್ಲಿ ಪೋಷಕರು ಹುಡುಕಾಟ ನಡೆಸಿದ್ದಾರೆ.
ಎಷ್ಟೇ ಹುಡುಕಾಡಿದರು ಮಗು ಸಿಗದ ಹಿನ್ನೆಲೆ ಪೊಲೀಸ್ ಟಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ತನಿಖೆ ಕೈಗೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಗುವಿನ ಮೃತ ದೇಹ ಮಹಿಳೆಯ ಮನೆಯ ಟೆರೆಸ್ ಮೇಲೆ ಸಿಕ್ಕಿದೆ. ಬಳಿಕ ಮಹಿಳೆಯನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.