Women Under Moving Train : ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಮಹಿಳೆ..!!
ಗಯಾ: ಬಿಹಾರದ ಗಯಾದಲ್ಲಿ ಶುಕ್ರವಾರ ರೈಲು ಹಳಿ ದಾಟುತ್ತಿದ್ದಾಗ ನಿಂತಿದ್ದ ರೈಲು ಹಠಾತ್ತನೆ ಚಲಿಸಲು ಪ್ರಾರಂಭಿಸಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಯಾದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ.
ಪ್ಲಾಟ್‌ಫಾರ್ಮ್‌ನ ಇನ್ನೊಂದು ಬದಿಯಿಂದ ಮತ್ತೊಂದು ರೈಲನ್ನು ಹತ್ತಬೇಕಾಗಿದ್ದರಿಂದ ಹಳಿ ದಾಟುವ ಸಂದರ್ಭದಲ್ಲಿ ರೈಲು ಏಕಾಏಕಿ ಚಲಿಸಲು ಆರಂಭಿಸಿದೆ. ಇದರಿಂದಾಗಿ ಮಹಿಳೆ ಗಾಬರಿಗೊಂಡಿದ್ದು, ಹಳಿ ಮೇಲೆ ಮಲಗಿಕೊಂಡಿದ್ದಾರೆ. ರೈಲು ಚಲಿಸಿದ ಬಳಿ ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆ ಬಿದ್ದಿರುವುದನ್ನು ಕಂಡ ಕೆಲ ಪೊಲೀಸರು ಧಾವಿಸಿ ಆಕೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
Women Under Moving Train –








