Womens day – ನೀವು ಓದಲೇ ಬೇಕಾದ ಮಹಿಳಾ ಸಾಧಕರ ಪರಿಚಯ
ವಿಶ್ವಾದ್ಯಂತ ಇಂದು (ಮಾರ್ಚ್ 8) ರಂದು ಮಹಿಳಾ ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ಇಂದಿನ ವಿಶೇಷ ದಿನದಂದು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅಪರೂಪದ ಮಹಿಳಾ ಸಾಧಕೀಯರನ್ನ ನಾವು ಪರಿಚಯಿಸುತ್ತಿದ್ದೇವೆ ನೋಡಿ…
1 ಬಿವಿ ನಾಗರತ್ನ
ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ಕರ್ನಾಟಕ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹಿರಿತನದ ಪ್ರಕಾರ, ಬಿ ವಿ ನಾಗರತ್ನ ಅವರು 2027 ರಲ್ಲಿ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಬಹುದಾದ ಸಾಧ್ಯತೆ ಇದೆ.
2 ಮೇಜರ್ ಐನಾ ರಾಣಾ
ಮೇಜರ್ ಐನಾ ರಾಣಾ ಇವರು ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ನ ರಸ್ತೆ ನಿರ್ಮಾಣ ಕಂಪನಿಯಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಸದ್ಯ ಭಾರತ-ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಣಾ ಅವರನ್ನ ಭಾರತ-ಚೀನಾ ಗಡಿಗೆ ಸಂಪರ್ಕಿಸುವ ಬದರಿನಾಥ್ ರಸ್ತೆ ಬಳಿ ನಿಯೋಜಿಸಲಾಗಿದೆ.
3 ಮೈತ್ರಿ
ಮೈತ್ರಿ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್. ಈಕೆಗೆ ಕೇವಲ 19 ವರ್ಷ. ತಂದೆ ಕಾಂತಿಲಾಲ್ ಪಟೇಲ್ ಕೃಷಿಕರಾಗಿದ್ದು, ತಾಯಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂತಿಲಾಲ್ ತನ್ನ ಮಗಳು ಅಮೆರಿಕದಲ್ಲಿ ಪೈಲಟ್ ತರಬೇತಿ ಪಡೆಯಲೆಂದು ತಮ್ಮ ಕೃಷಿ ಭೂಮಿಯನ್ನ ಮಾರಿದ್ದರು. ಮೈತ್ರಿ 18 ತಿಂಗಳ ತರಬೇತಿಯನ್ನು ಕೇವಲ 11 ತಿಂಗಳಲ್ಲಿ ಪೂರ್ಣಗೊಳಿಸಿದ್ದರು.
4 ಆನಿ ಸಿನ್ಹಾ ರಾಯ್
ಆನಿ ಸಿನ್ಹಾ ರಾಯ್ ಇವರು ಮುಂಬೈ ಮೆಟ್ರೋ ರೈಲ್ ಕಾರ್ಪೊರೇಶನ್ನಲ್ಲಿ ಪ್ರಾಜೆಕ್ಟ್ ಸೀನಿಯರ್ ರೆಸಿಡೆಂಟ್ ಇಂಜಿನಿಯರ್. ದೇಶದ ಏಕೈಕ ಮಹಿಳಾ ಸುರಂಗ ಎಂಜಿನಿಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಅನ್ನಿ ಅವರು 2009 ರಲ್ಲಿ ಚೆನ್ನೈ ಮೆಟ್ರೋ ಮತ್ತು 2015 ರಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ನಲ್ಲಿ ಕೆಲಸ ಮಾಡಿದ್ದಾರೆ. ಏಕಾಂಗಿಯಾಗಿ ಗೋದಾವರಿ ಎಂಬ ಸುರಂಗ-ಯಂತ್ರವನ್ನು ಓಡಿಸಿದ್ದಾರೆ. ಮುಂಬೈ ಮೆಟ್ರೋಗಾಗಿ ನಿರ್ಮಿಸಲಾಗುತ್ತಿರುವ 190-ಮೀಟರ್ ಉದ್ದದ ಸುರಂಗವನ್ನು ವಿನ್ಯಾಸಗೊಳಿಸಿದ್ದಾರೆ. 2018 ರಲ್ಲಿ ‘ವರ್ಷದ ಇಂಜಿನಿಯರ್’ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
5 ಇಂದು ಮಲ್ಹೋತ್ರಾ
ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪ ಎಸಗಿದ ಆರೋಪದ ಪ್ರಕರಣವನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಮೂಲದವರಾದ ಇಂದು ಮಲ್ಹೋತ್ರಾ ಅವರು ಮಾರ್ಚ್ 2021 ರಲ್ಲಿ ನಿವೃತ್ತರಾದರು. ಇವರು ದೇಶದ ಮೊದಲ ಮಹಿಳಾ ವಕೀಲರಾಗಿದ್ದರು, ವಕೀಲವೃತ್ತಿಯಿಂದಲೇ ನೇರವಾಗಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ದೇಶದ ಹಲವು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ. ಅವುಗಳಲ್ಲಿ ಕೇರಳದ ಶಬರಿಮಲೆ ಅತ್ಯಂತ ಜನಪ್ರಿಯ ತೀರ್ಪು. ಈ ವೇಳೆ ನಾಲ್ವರು ಪುರುಷ ನ್ಯಾಯಾಧೀಶರ ಅಭಿಪ್ರಾಯಕ್ಕಿಂತ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
.
6 ನೀನಾ ಗುಪ್ತಾ
ನೀನಾ ಗುಪ್ತಾ ಅವರು ಬೀಜಗಣಿತದ ಜ್ಯಾಮಿತಿ ಮತ್ತು ಕಮ್ಯುಟೇಟರ್ ಆಲ್ಜೀಬ್ರಾದಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಯುವ ಗಣಿತಜ್ಞ 2021 ರಾಮಾನುಜನ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಮತ್ತು ನಾಲ್ಕನೇ ಭಾರತೀಯರಾಗಿದ್ದಾರೆ.
7 ಮಂಜುಳಾ
ಮಂಜುಳಾ ಅತ್ಯಂತ ವಂಚಿತ ವರ್ಗಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಕೀಲೆ ಮತ್ತು ಹೋರಾಟಗಾರ್ತಿ. ಮಂಜುಳಾ ಗುಜರಾತ್ನ ದಲಿತ ಕುಟುಂಬಕ್ಕೆ ಸೇರಿದವರು. ಅವರು ನವಸರ್ಜನ್ ಟ್ರಸ್ಟ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ, ಇದು ಭಾರತದಲ್ಲಿನ ದಲಿತ ಹಕ್ಕುಗಳ ಅತಿದೊಡ್ಡ ಸಂಘಟನೆಯಾಗಿದೆ. 1992 ರಲ್ಲಿ ಈ ಸಂಸ್ಥೆಗೆ ಸೇರಿದ ಮೊದಲ ಮಹಿಳೆಯಾಗಿದ್ದಾರೆ. ಮಂಜುಳ ಅವರು ನಾಲ್ಕನೇ ವಯಸ್ಸಿನಲ್ಲಿ ನಾಲ್ವರು ಪುರುಷರಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದರು.
8 ಕೃತಿ
ಕೃತಿ 2021 ರ ವೈಲ್ಡ್ ಇನ್ನೋವೇಟರ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮತ್ತು ಏಷ್ಯನ್ ಮಹಿಳೆ. ವೈಲ್ಡ್ ಎಲಿಮೆಂಟ್ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡಿದೆ. ಕೃತಿ ಅವರು 2001 ರಿಂದ ಮಾನವ-ವನ್ಯಜೀವಿಗಳ ನಡುವೆ ಹೆಚ್ಚುತ್ತಿರುವ ಎನ್ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎನ್ಕೌಂಟರ್ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದಾರೆ.
9 ಮೇಘಾ ರಾಜಗೋಪಾಲನ್
ಮೇಘಾ ರಾಜಗೋಪಾಲನ್ ಅವರ ವರದಿಗಳು ಚೀನಾದ ಬಂಧನ ಶಿಬಿರಗಳಲ್ಲಿ ಜನರಿಗೆ ನೀಡಲಾಗುತ್ತಿರುವ ಚಿತ್ರಹಿಂಸೆಯ ಸತ್ಯವನ್ನು ಜಗತ್ತಿಗೆ ಬಹಿರಂಗಪಡಿಸಿದವು. ಚೀನಾ, ಲಕ್ಷಾಂತರ ಉಯಿಘರ್ ಮುಸ್ಲಿಮರನ್ನು ಹೇಗೆ ಬಂಧಿಸಿದೆ ಎಂದು ವರದಿ ಮಾಡಿದ್ದರು ಹೆಚ್ಚು ದೇಶಗಳಲ್ಲಿ ವರದಿ ಮಾಡಿದ್ದಾರೆ. ಮೇಘಾ ಅವರು ಪ್ರಸ್ತುತ BuzzFeed ನಲ್ಲಿ ಟೆಕ್ ವರದಿಗಾರರಾಗಿದ್ದಾರೆ.
10 ಪ್ರಭಾಬೆನ್
ಪ್ರಭಾಬೆನ್ ಅವರಿಗೆ ಇತ್ತೀಚೆಗೆ 92 ನೇ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಬಡವರಿಗಾಗಿ ಶಾಲೆಗಳು, ಕ್ಯಾಂಟೀನ್ಗಳನ್ನು ನಡೆಸುವುದರಲ್ಲಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. 1984 ರ ಭೋಪಾಲ್ ಅನಿಲ ದುರಂತದಿಂದ ಇತ್ತೀಚಿನ ಕೇರಳ ಪ್ರವಾಹದವರೆಗೆ, ಅವರು ಹಲವಾರು ಸಂದರ್ಭಗಳಲ್ಲಿ ಅಗತ್ಯವಿರುವವರಿಗಾಗಿ ಬಟ್ಟೆ ಬ್ಯಾಂಕ್ಗಳನ್ನು ನಡೆಸಿದ್ದಾರೆ. 1942 ರಲ್ಲಿ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದಾಗ, ಪ್ರಭಾಬೆನ್ ಅವರಿಗೆ 12 ವರ್ಷ ವಯಸ್ಸಾಗಿತ್ತು ಮತ್ತು ಆ ಅಭಿಯಾನದಲ್ಲಿ ಸೇರಿಕೊಂಡಿದ್ದರು. ಸ್ವದೇಶಿ ಆಂದೋಲನದ ಸಮಯದಲ್ಲಿ, ಅವರು ಹಲವಾರು ತಿಂಗಳುಗಳ ಕಾಲ ಸೆಣಬಿನಿಂದ ಮಾಡಿದ ಹಾಸಿಗೆಯನ್ನು ಮಾತ್ರ ಬಳಸುತ್ತಿದ್ದರು.