Women’s day – ಇಲ್ಲಿದೆ ಸಂಪೂರ್ಣವಾಗಿ ಮಹಿಳೆಯರೇ ನಡೆಸುವ ಮೊಬೈಲ್ ಸ್ಟೋರ್ …
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸ್ಯಾಮ್ಸಂಗ್ ಇಂಡಿಯಾ ಕಂಪನಿ ಸಂಪೂರ್ಣವಾಗಿ ಮಹಿಳೆಯರೇ ನಡೆಸುವ ಮೊದಲ ಮೊಬೈಲ್ ಸ್ಟೋರ್ ಅನ್ನು ಪ್ರಾರಂಭಿಸಿದೆ. ಅಹಮದಾಬಾದ್ ನಗರದ ಹೃದಯ ಭಾಗದಲ್ಲಿರುವ ಈ ಮಳಿಗೆಯು ಭಾರತೀಯ ಮಹಿಳೆಯರ ಶಕ್ತಿಯನ್ನು ಬಿಂಬಿಸುತ್ತದೆ.
ಇದರೊಂದಿಗೆ, ವೈವಿಧ್ಯತೆಯನ್ನು ಉತ್ತೇಜಿಸುವ ಮತ್ತು ಎಲ್ಲರಿಗೂ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಸ್ಯಾಮ್ಸಂಗ್ನ ಧ್ಯೇಯವನ್ನು ಬಲಪಡಿಸಲು ಕಂಪನಿ ಕಾರ್ಯಗಳಲ್ಲಿ ಇದು ಒಂದಾಗಿದೆ.
ಅಹಮದಾಬಾದ್ನ ನವರಂಗ್ಪುರ ಪ್ರದೇಶದ ವಿಜಯ್ ಕ್ರಾಸ್ ರಸ್ತೆಯಲ್ಲಿರುವ ಸ್ಯಾಮ್ಸಂಗ್ ಸ್ಮಾರ್ಟ್ಕೆಫೆ ಗ್ರಾಹಕರಿಗೆ ಸ್ಯಾಮ್ಸಂಗ್ ಸಾಟಿಯಿಲ್ಲದ ಅನುಭವವನ್ನು ಒದಗಿಸುತ್ತದೆ. ಇಲ್ಲಿ ಗ್ರಾಹಕರು ಸ್ಯಾಮ್ಸಂಗ್ ಕಂಪನಿಯ ಎಲ್ಲಾ ಥರಹದ ಮೊಬೈಲ್ ಗಳನ್ನ ವಿಕ್ಷಿಸಿಬಹುದು ಮತ್ತು ಖರೀದಿಸಬಹುದು. ಇತ್ತೀಚಿನ Galaxy S22 ಸರಣಿಯ ಇತ್ತೀಚಿನ ಪ್ರಮುಖ ಸ್ಮಾರ್ಟ್ಫೋನ್ಗಳು, Galaxy Tab S8 ಸರಣಿ, Galaxy Buds 2 ಮತ್ತು Galaxy Watch 4 ಕೂಡ ಲಭ್ಯವಿರಲಿದೆ.
ಈ ಮಳಿಗೆಯ ಎಲ್ಲಾ ಕೆಲಸಗಳನ್ನ ಸಂಪೂರ್ಣವಾಗಿ ಮಹಿಳಾ ಉದ್ಯೋಗಿಳೇ ನೋಡಿಕೊಳ್ಳುತ್ತಾರೆ. ಇಲ್ಲಿ ಸ್ಟೋರ್ ಮ್ಯಾನೇಜರ್ಗಳಿಂದ ಹಿಡಿದು ಸ್ಯಾಮ್ಸಂಗ್ ಎಕ್ಸ್ಪೀರಿಯೆನ್ಸ್ ಕನ್ಸಲ್ಟೆಂಟ್ಗಳು, ಗ್ರಾಹಕರ ಖರೀದಿಗಳನ್ನು ಸುಲಭಗೊಳಿಸಲು Galaxy ಗ್ಯಾಡ್ಜೆಟ್ ಗಳ ಮಾಹಿತಿಯನ್ನು ಒದಗಿಸುತ್ತಾರೆ.
ಕೇವಲ ಮೊಬೈಲ್ ಸ್ಟೋರ್ ಗೆ ಮಾತ್ರ ಸೀಮಿತವಲ್ಲದೆ, ಗ್ರಾಹಕ ಸೇವೆ, ಮಾರಾಟ, ಹಣಕಾಸು ನಿರ್ವಹಣೆ, ಸ್ಟಾಕ್ ಪ್ಲಾನ್ ಮತ್ತು ಮುಖ್ಯವಾಗಿ ಗ್ರಾಹಕ ಸುರಕ್ಷತಾ ಪ್ರೋಟೋಕಾಲ್ಗಳಂತಹ ಪ್ರಮುಖ ಕಾರ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.