Womens Day : ಮಹಿಳಾ ದಿನಾಚರಣೆಗೆ ಪ್ರಮುಖ ಬ್ರ್ಯಾಂಡ್ ಗಳಿಂದ ಸೆಲ್ಯೂಟ್…..
ಮಾರ್ಚ್ 8… ಇಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ.. ಹಲವಾರು ಬ್ರ್ಯಾಂಡ್‌ಗಳು ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ವಿಷ್ ಮಾಡಿ ಸೆಲ್ಯೂಟ್ ಮಾಡಿವೆ.. ವಿಶೇಷ ಹ್ಯಾಷ್ ಟ್ಯಾಗ್ ಗಳ ಮೂಲಕ ಹೊಸ ಹೊಸ ಅಭಿಯಾನ ಶುರು ಮಾಡಿವೆ.
ಬಾಂಬೆ ಶೇವಿಂಗ್ ವುಮೆನ್ ಕಂಪನಿಯು – ಎಂಬ ವಿಡಿಯೋ ಲಾಂಚ್ ಮಾಡಿ #BreakTheHairarchy ಅಭಿಯಾನ ಆರಂಭಿಸಿ ಮಹಿಳಾ ದಿನಾಚರಣೆಗೆ ಶುಭಕೋರಿದೆ.
ಮದರ್ ಸ್ಪರ್ಶ್ – (Mother Sparsh )
ಮದರ್ ಸ್ಪರ್ಶ್ ಕಂಪನಿಯು #BelieveIn ಅಭಿಯಾನಯಡಿ ಮಹಿಳಾ ಶಕ್ತಿಗೆ ಸಲಾಂ ಹೇಳಿದೆ.
#BelieveIn ಅಭಿಯಾನದ ಭಾಗವಾಗಿ ಮದರ್ ಸ್ಪರ್ಶ್ ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿದೆ. ಪ್ರಶ್ನೆ ಅವರು ಯಾವುದನ್ನ ನಂಬುತ್ತಾರೆ.. ಯಾವುದರಲ್ಲಿ ಅವರಿಗೆ ನಂಬಿಕೆ ಇದೆ ಎಂದಾಗಿತ್ತು.. ನಂಬಿಕೆ , ಬೆಂಬಲ , ಸ್ವಯಂ ಪ್ರೇರಣ ಹೀಗೆ ಅಲ್ಲಿನ ಮಹಿಳಾ ಉದ್ಯೋಗಿಗಳು ನಾನಾ ಉತ್ತರಗಳನ್ನ ನೀಡಿದ್ದಾರೆ. ಕಂಪಿನಯು ಬಿಲೀವ್ ಇನ್ ಯುವರ್ ಸೆಲ್ಫ್ ಎಂಬ ಸುಂದರ ಮನಮುಟ್ಟುವ ವಿಡಿಯೋ ರಿಲೀಸ್ ಮಾಡಿ ಮಹಿಳೆಯರಿಗೆ ಗೌರವಿಸಿದೆ.
ಪ್ರೆಗಾ ನ್ಯೂಸ್ (Prega News)
#SheCanCarryBoth ಅಭಿನಾಯನದಡಿ ಒಂದು ಹಾರ್ಟ್ ಟಚಿಂಗ್ ವಿಡಿಯೋವೊಂದನ್ನ ಒಂದೊಳ್ಳೆ ಮೆಸೇಜ್ ನೀಡುವಂತಹ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು , ಇದು ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ, ಮೆಚ್ಚುಗೆ ಪಡೆದಿದೆ.. ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಪ್ರತಿ ಮಹಿಳೆಯ ಮನಸ್ಸಿನಲ್ಲಿ ಉದ್ಭವಿಸುವ ರೂಢಿಗತ ಪ್ರತಿಬಂಧಕಗಳನ್ನು ಮುರಿಯಲು ಉದ್ದೇಶಿಸಿದ ವಿಡಿಯೋ ಇದಾಗಿದೆ. ಮಗುವನ್ನು ಹೊಂದುವುದರಿಂದ ವೃತ್ತಿಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಹಲವರ ಅನುಮಾನ ಗೊಂದಲಗಳನ್ನ ದೂರ ಮಾಡುವುದು , ಹೆಣ್ಣು ತನ್ನ ವೃತ್ತಿ ಹಾಗೂ ತಾಯ್ತನದ ಜವಾಬ್ದಾರಿ ಎರಡನ್ನೂ ಒಟ್ಟಾಗಿ ನಿಭಾಯಿಸಬಲ್ಲಳು ಎಂಬುದನ್ನ ತೋರಿಸಿಕೊಟ್ಟಿದೆ ಈ ವಿಡಿಯೋ.. ಈ ಮೂಲಕ ಮಹಿಳೆ ಎಲ್ಲವನ್ನೂ ನಿಭಾಸಿಬಲ್ಲಳು ಎಂಬುದನ್ನ ಸಾರಿ ಹೇಳಲಾಗಿದೆ.








