ಇತ್ತ ವೋಟ್ ಹಾಕ್ತಿದ್ದಂತೆ ಅತ್ತ ಖಾತೆಯಲ್ಲಿದ್ದ ದುಡ್ಡು ಅಬೇಸ್..!
ಪಟ್ನಾ : ಬಿಹಾರದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.. ಮಹಿಳೆಯರು ಬ್ಯಾಂಕಿನಲ್ಲಿಟ್ಟಿದ್ದ ಸಾವಿರಾರು ಹಣ ಅಬೇಸ್ ಆಗಿದೆ.. ಇತ್ತೀಚೆಗೆ ನಡೆದ ಬಿಹಾರ್ ಪಂಚಾಯತ್ ಚುನಾವಣೆಯಲ್ಲಿ ಕೆಲ ಮಹಿಳೆಯರು, ಮತ ಚಲಾಯಿಸಿ ಬಂದ ಕೆಲವೇ ಹೊತ್ತಲ್ಲೇ ಅವರುಗಳ ಬ್ಯಾಂಕ್ ಖಾತೆಯಲ್ಲಿ ಇದ್ದ ಸಾವಿರಾರು ರೂಪಾಯಿ ಹಣ ಕಳ್ಳತನವಾಗಿದೆ..
ಪುರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತ್ನ ರಿಹುವಾ ಗ್ರಾಮದಲ್ಲಿ ನ.29ರಂದು ಪಂಚಾಯತ್ ಚುನಾವಣೆ ಮತ ದಾನ ನಡೆದಿತ್ತು. ಈ ವೇಳೆ ಚುನಾವಣಾಧಿಕಾರಿಗಳು ತಾವು ಮತ ಚಲಾವಣೆಗೆ ಬಂದಾಗ ಬಯೋಮೆಟ್ರಿಕ್ ನಲ್ಲಿ ತಮ್ಮ ಫಿಂಗರ್ ಪ್ರಿಂಟ್ ಪಡೆದಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಕೆನರಾ ಬ್ಯಾಂಕ್ ನಲ್ಲಿದ್ದ ತಮ್ಮ ಹಣವೆಲ್ಲಾ ಮಾಯವಾಗಿದೆ ಎಂದು 30ಕ್ಕೂ ಹೆಚ್ಚು ಮಹಿಳೆಯರು ದೂರು ಸಲ್ಲಿಸಿದ್ದಾರೆ.
ಚೋಪ್ರಾ ಪಂಚಾಯತ್ ಮುಖ್ಯ ಸ್ಥಜಾವೇದ್ ಇಕ್ಬಾಲ್ ಈ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಗೈಗೊಳ್ಳಬೇಕು ಎಂದು ಪುರ್ನಿಯಾ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.