ಮಹಿಳಾ ವಿಶ್ವಕಪ್ : ಭಾರತಕ್ಕೆ ಸೋಲು, 6 ವಿಕೆಟ್ ಗಳ ಜಯ ಸಾಧಿಸಿದ ಕಾಂಗಾರೂ ಪಡೆ
ಮಹಿಳಾ ಏಕದಿನ ವಿಶ್ವಕಪ್‌ನ 18ನೇ ಪಂದ್ಯದಲ್ಲಿ ಭಾರತವನ್ನು ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಮಣಿಸಿದೆ.ನ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ 107 ಎಸೆತಗಳಲ್ಲಿ 97 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಆಡಿದರು.
With 10 points on the board, Australia have officially sealed a spot in the #CWC22 semi-finals 🌟 pic.twitter.com/2DJ6C2dnc0
— ICC (@ICC) March 19, 2022
ಸೆಮಿಫೈನಲ್‌ಗೆ ಅರ್ಹತೆ ಪಡೆದ ಆಸ್ಟ್ರೇಲಿಯಾ
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ಆಸ್ಟ್ರೇಲಿಯನ್ ಈ ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿದೆ. 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ತಂಡ ಸತತ ಎರಡು ಬಾರಿ ಸೋತಿದ್ದು, ಈ ಟೂರ್ನಿಯಲ್ಲಿ ಒಟ್ಟಾರೆ ಇದು ಮೂರನೇ ಸೋಲು.
ಭಾರತ ಈಗ ಐದು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ನಾಲ್ಕು ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲು ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಟೀಮ್ ಇಂಡಿಯಾದ ಮುಂದಿನ ಪಂದ್ಯ ಮಾರ್ಚ್ 22 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಮಾರ್ಚ್ 27 ರಂದು ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಟೀಂ ಇಂಡಿಯಾದಿಂದ ಹಲವು ಶ್ರೇಷ್ಠ ಇನ್ನಿಂಗ್ಸ್‌ಗಳು ಬಂದಿವೆ . ಪಂದ್ಯದ ಆರಂಭದಲ್ಲಿ ಭಾರತ 28 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಸ್ಮೃತಿ ಮಂಧಾನ 10 ರನ್ ಗಳಿಸಿ ಔಟಾದರು ಮತ್ತು ಶೆಫಾಲಿ ವರ್ಮಾ 12 ರನ್ ಗಳಿಸಿದರು.
ಇದಾದ ಬಳಿಕ ಯಾಸ್ತಿಕಾ ಭಾಟಿಯಾ ಜೊತೆಗೂಡಿ ನಾಯಕಿ ಮಿಥಾಲಿ ರಾಜ್ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇವರಿಬ್ಬರು ಮೂರನೇ ವಿಕೆಟ್‌ಗೆ 154 ಎಸೆತಗಳಲ್ಲಿ 130 ರನ್‌ಗಳ ಜೊತೆಯಾಟ ನಡೆಸಿದರು. ಯಾಸ್ತಿಕಾ ತಮ್ಮ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಗಳಿಸಿದರು.
ಅರ್ಧಶತಕ ಬಾರಿಸಿದ ಯಾಸ್ತಿಕಾಗೆ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 83 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಅದೇ ವೇಳೆ ನಾಯಕಿ ಮಿಥಾಲಿ 96 ಎಸೆತಗಳಲ್ಲಿ 68 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೂಡ 28 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ರಿಚಾ ಘೋಷ್ (8) ಮತ್ತು ಸ್ನೇಹ್ ರಾಣಾ (0) ಹೆಚ್ಚು ಮಾಡಲು ಸಾಧ್ಯವಾಗಲಿಲ್ಲ. ಇದರ ನಂತರ, ಉಪನಾಯಕ ಹರ್ಮನ್‌ಪ್ರೀತ್ ಪೂಜಾ ವಸ್ತ್ರಾಕರ್ ಅವರೊಂದಿಗೆ ಭಾರತವನ್ನು 250 ರನ್‌ಗಳ ಗಡಿ ದಾಟಿಸಿದರು. ಇವರಿಬ್ಬರ ನಡುವೆ ಏಳನೇ ವಿಕೆಟ್‌ಗೆ 46 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟ ಬಂದಿತು.
ಇದೇ ವೇಳೆ ಹರ್ಮನ್‌ಪ್ರೀತ್ ತಮ್ಮ ODI ವೃತ್ತಿಜೀವನದ 15ನೇ ಅರ್ಧಶತಕ ದಾಖಲಿಸಿದರು. ಅದೇ ವೇಳೆ ಭಾರತ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಪೂಜಾ ರನೌಟ್ ಆದರು. ಅವರು 28 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 34 ರನ್ ಗಳಿಸಿದರು. ಹರ್ಮನ್‌ಪ್ರೀತ್ 47 ಎಸೆತಗಳಲ್ಲಿ 57 ರನ್ ಗಳಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ ಮೂರು ಹಾಗೂ ಎಲೆನಾ ಕಿಂಗ್ ಎರಡು ವಿಕೆಟ್ ಪಡೆದರು. ಜೆಸ್ ಜೊನಾಸನ್ ಒಂದು ವಿಕೆಟ್ ಪಡೆದರು.
Australia defeat India by 6 wickets and win their fifth #CWC22 match on trot 🙌 pic.twitter.com/nurjWuWH9N
— ICC Cricket World Cup (@cricketworldcup) March 19, 2022
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಪ್ರದರ್ಶನ
278 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಆರಂಭ ಅಮೋಘವಾಗಿತ್ತು. ಅಲಿಸ್ಸಾ ಹೀಲಿ ಮತ್ತು ರಾಚೆಲ್ ಹೇನ್ಸ್ ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿದರು. ಹೀಲಿ 65 ಎಸೆತಗಳಲ್ಲಿ 72 ರನ್ ಗಳಿಸಿ ಔಟಾದರು. ಇದಾದ ನಂತರ ರಾಚೆಲ್ ಕೂಡ 53 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರು.
ಮೂರು ರನ್‌ಗಳ ಅಂತರದಲ್ಲಿ ಹೀಲಿ ಮತ್ತು ಹೇನ್ಸ್‌ರ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಮೆಗ್ ಲ್ಯಾನಿಂಗ್ ಮತ್ತು ಎಲಿಸ್ ಪೆರ್ರಿ ಇನ್ನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್‌ಗೆ 123 ಎಸೆತಗಳಲ್ಲಿ 103 ರನ್‌ಗಳ ಜೊತೆಯಾಟದಲ್ಲಿ ಆಸ್ಟ್ರೇಲಿಯಾದ ಸ್ಕೋರ್ 200ರ ಗಡಿ ದಾಟಿತು. ಪೆರ್ರಿ 51 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು.
ಇದಾದ ಬಳಿಕ ಬೆತ್ ಮೂನಿ ಜೊತೆಗೂಡಿ ಲ್ಯಾನಿಂಗ್ ಆಸ್ಟ್ರೇಲಿಯ ತಂಡಕ್ಕೆ ಜಯ ತಂದುಕೊಟ್ಟರು. ಲ್ಯಾನಿಂಗ್ 107 ಎಸೆತಗಳಲ್ಲಿ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಮೂನಿ 20 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಪೂಜಾ ವಸ್ತ್ರಕರ್ ಎರಡು ವಿಕೆಟ್ ಪಡೆದರೆ ಸ್ನೇಹ ರಾಣಾ ಒಂದು ವಿಕೆಟ್ ಪಡೆದರು.








