ADVERTISEMENT
Saturday, September 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಹಿಳಾ ವಿಶ್ವಕಪ್ :  ಭಾರತಕ್ಕೆ ಸೋಲು, 6 ವಿಕೆಟ್ ಗಳ ಜಯ ಸಾಧಿಸಿದ ಕಾಂಗಾರೂ ಪಡೆ

Naveen Kumar B C by Naveen Kumar B C
March 19, 2022
in Newsbeat, Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಮಹಿಳಾ ವಿಶ್ವಕಪ್ :  ಭಾರತಕ್ಕೆ ಸೋಲು, 6 ವಿಕೆಟ್ ಗಳ ಜಯ ಸಾಧಿಸಿದ ಕಾಂಗಾರೂ ಪಡೆ

ಮಹಿಳಾ ಏಕದಿನ ವಿಶ್ವಕಪ್‌ನ 18ನೇ ಪಂದ್ಯದಲ್ಲಿ ಭಾರತವನ್ನು ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಮಣಿಸಿದೆ.ನ  ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ 107 ಎಸೆತಗಳಲ್ಲಿ 97 ರನ್ ಗಳಿಸಿ ಉತ್ತಮ ಇನ್ನಿಂಗ್ಸ್ ಆಡಿದರು.

Related posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ

September 26, 2026
ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

September 26, 2026

With 10 points on the board, Australia have officially sealed a spot in the #CWC22 semi-finals 🌟 pic.twitter.com/2DJ6C2dnc0

— ICC (@ICC) March 19, 2022

ಸೆಮಿಫೈನಲ್‌ಗೆ ಅರ್ಹತೆ ಪಡೆದ ಆಸ್ಟ್ರೇಲಿಯಾ

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ಆಸ್ಟ್ರೇಲಿಯನ್ ಈ ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿದೆ.  10 ಅಂಕಗಳೊಂದಿಗೆ  ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  ಭಾರತ ತಂಡ ಸತತ ಎರಡು ಬಾರಿ ಸೋತಿದ್ದು,  ಈ ಟೂರ್ನಿಯಲ್ಲಿ ಒಟ್ಟಾರೆ ಇದು ಮೂರನೇ ಸೋಲು.

ಭಾರತ ಈಗ ಐದು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ನಾಲ್ಕು ಅಂಕಗಳನ್ನು ಗಳಿಸಿ  ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲು ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಟೀಮ್ ಇಂಡಿಯಾದ ಮುಂದಿನ ಪಂದ್ಯ ಮಾರ್ಚ್ 22 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.  ಮಾರ್ಚ್ 27 ರಂದು ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಟೀಂ ಇಂಡಿಯಾದಿಂದ ಹಲವು ಶ್ರೇಷ್ಠ ಇನ್ನಿಂಗ್ಸ್‌ಗಳು ಬಂದಿವೆ . ಪಂದ್ಯದ ಆರಂಭದಲ್ಲಿ  ಭಾರತ 28 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಸ್ಮೃತಿ ಮಂಧಾನ 10 ರನ್ ಗಳಿಸಿ ಔಟಾದರು ಮತ್ತು ಶೆಫಾಲಿ ವರ್ಮಾ 12 ರನ್ ಗಳಿಸಿದರು.

ಇದಾದ ಬಳಿಕ ಯಾಸ್ತಿಕಾ ಭಾಟಿಯಾ ಜೊತೆಗೂಡಿ ನಾಯಕಿ ಮಿಥಾಲಿ ರಾಜ್ ಇನ್ನಿಂಗ್ಸ್ ಕೈಗೆತ್ತಿಕೊಂಡರು. ಇವರಿಬ್ಬರು ಮೂರನೇ ವಿಕೆಟ್‌ಗೆ 154 ಎಸೆತಗಳಲ್ಲಿ 130 ರನ್‌ಗಳ ಜೊತೆಯಾಟ ನಡೆಸಿದರು. ಯಾಸ್ತಿಕಾ ತಮ್ಮ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಗಳಿಸಿದರು.

ಅರ್ಧಶತಕ ಬಾರಿಸಿದ ಯಾಸ್ತಿಕಾಗೆ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 83 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಅದೇ ವೇಳೆ ನಾಯಕಿ ಮಿಥಾಲಿ 96 ಎಸೆತಗಳಲ್ಲಿ 68 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೂಡ 28 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ರಿಚಾ ಘೋಷ್ (8) ಮತ್ತು ಸ್ನೇಹ್ ರಾಣಾ (0) ಹೆಚ್ಚು ಮಾಡಲು ಸಾಧ್ಯವಾಗಲಿಲ್ಲ. ಇದರ ನಂತರ, ಉಪನಾಯಕ ಹರ್ಮನ್‌ಪ್ರೀತ್ ಪೂಜಾ ವಸ್ತ್ರಾಕರ್ ಅವರೊಂದಿಗೆ ಭಾರತವನ್ನು 250 ರನ್‌ಗಳ ಗಡಿ ದಾಟಿಸಿದರು. ಇವರಿಬ್ಬರ ನಡುವೆ ಏಳನೇ ವಿಕೆಟ್‌ಗೆ 46 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟ ಬಂದಿತು.

ಇದೇ ವೇಳೆ ಹರ್ಮನ್‌ಪ್ರೀತ್ ತಮ್ಮ ODI ವೃತ್ತಿಜೀವನದ 15ನೇ ಅರ್ಧಶತಕ ದಾಖಲಿಸಿದರು. ಅದೇ ವೇಳೆ ಭಾರತ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಪೂಜಾ ರನೌಟ್ ಆದರು. ಅವರು 28 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 34 ರನ್ ಗಳಿಸಿದರು. ಹರ್ಮನ್‌ಪ್ರೀತ್ 47 ಎಸೆತಗಳಲ್ಲಿ 57 ರನ್ ಗಳಿಸಿ ಅಜೇಯರಾಗಿ ಉಳಿದರು.  ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ ಮೂರು ಹಾಗೂ ಎಲೆನಾ ಕಿಂಗ್ ಎರಡು ವಿಕೆಟ್ ಪಡೆದರು. ಜೆಸ್ ಜೊನಾಸನ್ ಒಂದು ವಿಕೆಟ್ ಪಡೆದರು.

Australia defeat India by 6 wickets and win their fifth #CWC22 match on trot 🙌 pic.twitter.com/nurjWuWH9N

— ICC Cricket World Cup (@cricketworldcup) March 19, 2022

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಪ್ರದರ್ಶನ

278 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಆರಂಭ ಅಮೋಘವಾಗಿತ್ತು. ಅಲಿಸ್ಸಾ ಹೀಲಿ ಮತ್ತು ರಾಚೆಲ್ ಹೇನ್ಸ್ ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿದರು. ಹೀಲಿ 65 ಎಸೆತಗಳಲ್ಲಿ 72 ರನ್ ಗಳಿಸಿ ಔಟಾದರು. ಇದಾದ ನಂತರ ರಾಚೆಲ್ ಕೂಡ 53 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರು.

ಮೂರು ರನ್‌ಗಳ ಅಂತರದಲ್ಲಿ ಹೀಲಿ ಮತ್ತು ಹೇನ್ಸ್‌ರ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಮೆಗ್ ಲ್ಯಾನಿಂಗ್ ಮತ್ತು ಎಲಿಸ್ ಪೆರ್ರಿ ಇನ್ನಿಂಗ್ಸ್  ಕಟ್ಟಿದರು.  ಮೂರನೇ ವಿಕೆಟ್‌ಗೆ 123 ಎಸೆತಗಳಲ್ಲಿ 103 ರನ್‌ಗಳ ಜೊತೆಯಾಟದಲ್ಲಿ  ಆಸ್ಟ್ರೇಲಿಯಾದ ಸ್ಕೋರ್ 200ರ ಗಡಿ ದಾಟಿತು. ಪೆರ್ರಿ 51 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು.

ಇದಾದ ಬಳಿಕ ಬೆತ್ ಮೂನಿ ಜೊತೆಗೂಡಿ ಲ್ಯಾನಿಂಗ್ ಆಸ್ಟ್ರೇಲಿಯ ತಂಡಕ್ಕೆ ಜಯ ತಂದುಕೊಟ್ಟರು. ಲ್ಯಾನಿಂಗ್ 107 ಎಸೆತಗಳಲ್ಲಿ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಮೂನಿ 20 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಪೂಜಾ ವಸ್ತ್ರಕರ್ ಎರಡು ವಿಕೆಟ್ ಪಡೆದರೆ  ಸ್ನೇಹ ರಾಣಾ ಒಂದು ವಿಕೆಟ್ ಪಡೆದರು.

Tags: Australiawomen's World Cup
ShareTweetSendShare
Join us on:

Related Posts

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಸಚಿವ ಸತೀಶ್ ಜಾರಕಿಹೊಳಿ ಸುತ್ತ ಇಡಿ ಚಕ್ರವ್ಯೂಹ: ದೆಹಲಿ ಮಟ್ಟಕ್ಕೆ ತಲುಪಿದ ತನಿಖೆಯ ಬಿಸಿ -ಸಚಿವ ಸ್ಥಾನಕ್ಕೆ ಕುತ್ತು ತರುತ್ತಾ ಕಮಿಷನ್ ಆರೋಪ

by Shwetha
September 26, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧದ ಇಡಿ ತನಿಖೆ ಅತಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಬೆಂಗಳೂರು ಮಟ್ಟದ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಪ್ರಣಾಳಿಕೆ ನಂಬಿದ ರೈತರಿಗೆ ದ್ರೋಹವಾಗಿದೆಯೇ? ಭೂ ಸುಧಾರಣೆ ಭರವಸೆ ಮರೆತ ಸರ್ಕಾರ:ನಮಗೂ ಬಿಜೆಪಿಗೂ ವ್ಯತ್ಯಾಸವೇನು ಎಂದು ಪ್ರಶ್ನಿಸಿ ತಮ್ಮ ಸರ್ಕಾರದ ವಿರುದ್ಧವೇ ಯುದ್ಧ ಸಾರಿದ ಬಿಆರ್ ಪಾಟೀಲ್

by Shwetha
September 26, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದ ಹಿರಿಯ ಶಾಸಕರಿಂದಲೇ ಮತ್ತೆ ಭಾರಿ ಮುಜುಗರ ಎದುರಾಗಿದೆ. ಈ ಹಿಂದೆ ವಸತಿ ಇಲಾಖೆಯ ಅವ್ಯವಹಾರದ ಬಗ್ಗೆ ಧ್ವನಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಹಬ್ಬದ ಸಂಭ್ರಮ ಹೆಚ್ಚಿಸಲು ಕೇಂದ್ರದಿಂದ ಸಿಹಿ ಸುದ್ದಿ: ಅಡುಗೆ ಎಣ್ಣೆ ಬೆಲೆ ಇಳಿಕೆಗೆ ಮುಹೂರ್ತ ಫಿಕ್ಸ್

by Shwetha
September 26, 2026
0

ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬದ ಸಡಗರದಲ್ಲಿರುವ ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಅತಿ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಅಡುಗೆ ಮನೆಯ ಬಜೆಟ್ ಏರುಪೇರಾಗುತ್ತಿರುವ ಈ ಹೊತ್ತಿನಲ್ಲಿ,...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಒಂದು ಕೊಲೆಗೆ ಕ್ಷಮಾದಾನ ಸಿಕ್ಕರೆ ನಾನು ಮೊದಲು ಕೊಲ್ಲುವುದು ಮುಖ್ಯ ಚುನಾವಣಾ ಆಯುಕ್ತರನ್ನೇ:ವಿಐಪಿ ಮುಖ್ಯಸ್ಥ ಮುಕೇಶ್ ಸಾಹನಿ ಆಕ್ರೋಶ

by Shwetha
September 26, 2026
0

ಪಟ್ನಾ: ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಹಾರದ ಮಾಜಿ ಸಚಿವ ಹಾಗೂ ವಿಕಾಸಶೀಲ ಇನ್ಸಾನ್ ಪಾರ್ಟಿ ಮುಖ್ಯಸ್ಥ ಮುಕೇಶ್ ಸಾಹನಿ...

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

ಚುನಾವಣಾ ಆಯೋಗ ಬಿಜೆಪಿಯ ಚುನಾವಣಾ ಮೋರ್ಚಾವೇ? ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಎಲ್ಲಿ ಬಚ್ಚಿಟ್ಟಿದ್ದೀರಿ :ಆಯೋಗದ ವಕ್ತಾರನಂತೆ ಬಿಜೆಪಿ ವರ್ತನೆ ಏಕೆ? ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಖರ್ಗೆ

by Shwetha
September 26, 2026
0

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಆಯುಕ್ತರ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿರುವ ಬೆನ್ನಲ್ಲೇ, ಗೃಹ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆಯೋಗದ ವಿರುದ್ಧ ಅತ್ಯಂತ ಕಟುವಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram