World Championship: ಮಣಿಕಟ್ಟು ನೋವಿನ ನಡುವೆಯೂ ಬೆಳ್ಳಿ ಗೆದ್ದ ಮೀರಾಬಾಯಿ ಚಾನು…
ಭಾರತದ ಸ್ಟಾರ್ ವೇಟ್ಲಿಫ್ಟರ್ ಮೀರಾಬಾಯಿ ಚಾನು ಮಣಿಕಟ್ಟಿನ ಗಾಯದ ನಡುವೆಯೂ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 200 ಕೆಜಿ ತೂಕ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ.
49 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾ, ಸ್ನ್ಯಾಚ್ನಲ್ಲಿ 87 ಕೆಜಿ ತೂಕ ಎತ್ತುವ ಮೂಲಕ ಯಶಸ್ವಿಯಾಗಿದ್ದಾರೆ. ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 113 ಕೆಜಿ ಲಿಫ್ಟ್ ಮಾಡಿದರು.
ಒಟ್ಟು 206 ಕೆಜಿ (93 ಕೆಜಿ + 113 ಕೆಜಿ) ಗುರಿಯೊಂದಿಗೆ ಚಿನ್ನ ಗೆದ್ದ ಚೀನಾದ ಜಿಯಾಂಗ್ ಹುಯಿಹುವಾ ನಂತರ ಭಾರತೀಯ ಆಟಗಾರ್ತಿ ಸೆಕೆಂಡ್ ಫಿನಿಶಿಂಗ್ ಮಾಡಿದರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಹೌ ಝಿಹುವಾ 198 ಕೆಜಿ (89 ಕೆಜಿ + 109 ಕೆಜಿ) ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
2017 ರ ವಿಶ್ವ ಚಾಂಪಿಯನ್ ಚಾನು ಸೆಪ್ಟೆಂಬರ್ನಲ್ಲಿ ತರಬೇತಿ ಅವಧಿಯಲ್ಲಿ ಮಣಿಕಟ್ಟಿನ ನೋವಿಗೆ ಒಳಗಾಗಿದ್ದರು. ಅಕ್ಟೋಬರ್ನಲ್ಲಿ ಗಾಯದ ನಡುವೆಯೂ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಭಾಗವಹಿಸಿದ್ದರು.
World Championship: Mirabai Chanu wins silver despite wrist pain…