ನವದೆಹಲಿ : ಇಂದು ವಿಶ್ವ ಭೂ ದಿನಾಚರಣೆ. ಈ ಹಿನ್ನೆಲೆ ಜಗತ್ತಿಗೆ ಕಂಟಕವಾಗಿರುವ ಕೊರೊನಾ ವೈರಸ್ ನ ಪರಿಸ್ಥಿತಿ ನಡುವೆಯೇ ಪ್ರಧಾನಿ ಮೋದಿ ಅವರು ವಿಶ್ವ ಭೂ ದಿನಾಚರಣೆಗೆ ಹೃದಯಸ್ಪರ್ಶಿ ಸಂದೇಶ ಸಾರಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಅಂತಾರಾಷ್ಟ್ರೀಯ ಭೂ ತಾಯಿಯ ದಿನದಂದು ನಾವೆಲ್ಲರೂ ನಮ್ಮ ಗ್ರಹ ತೋರಿದ ಕಾಳಜಿ ಹಾಗೂ ಸಹಾನುಭೂತಿಗಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ ‘. ‘ಸ್ವಚ್ಛ, ಆರೋಗ್ಯಕರ ಹಾಗೂ ಸಮೃದ್ಧ ಗ್ರಹದ ಕಡೆಗೆ ಕೆಲಸ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ’ ಎಂದು ಕರೆ ನೀಡಿದ್ದಾರೆ.
On International Day of Mother Earth, we all express gratitude to our planet for the abundance of care & compassion. Let us pledge to work towards a cleaner, healthier & more prosperous planet.
A shout out to all those working at the forefront to defeat COVID-19. #EarthDay2020
— Narendra Modi (@narendramodi) April 22, 2020
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಮಟ್ಟ ಹಾಕಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ಯೋಧರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ. ಅಲ್ಲದೆ ಜಾಗತಿಕ ತಾಪಮಾನದಲ್ಲಿ ಉಂಟಾಗುತ್ತಿರುವ ಏರುಪೇರಿನಿಂದಾಗಿ ಭೂಮಿ ಅಪಾಯದಲ್ಲಿದೆ. ಕೈಗಾರಿಕಾ ಮಾಲಿನ್ಯವು ವಾಯುವನ್ನು ಕಲುಷಿತಗೊಳಿಸುತ್ತಿದ್ದು, ನೀರನ್ನು ಮಲಿನಗೊಳಿಸಿದೆ. ಈ ಬಾರಿ ವಿಶ್ವ ಭೂ ದಿನಾಚರಣೆಯಂದು ಮಹಾಮಾರಿ ಕೊರೊನಾ ವೈರಸ್ ವಿಪತ್ತು ಎದುರಾಗಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ. ಈ ಕೊರೊನಾ ವೈರಸ್ ಯುದ್ಧದಲ್ಲಿ ಗೆದ್ದ ಬಳಿಕ ಜೀವನ ಸಹಜ ಸ್ಥಿತಿಗೆ ಮರಳಿದರೂ ಎಲ್ಲರೂ ಭೂ ತಾಯಿಯ ಬಗ್ಗೆ ಅತೀವ ಕಾಳಜಿ ವಹಿಸಬೇಕಿದೆ ಎಂದು ಪ್ರಧಾನಿ ಕರೆ ನೀಡಿದ್ದಾರೆ.








