ಕೋಲಾರದಲ್ಲಿ ರೈತ ಸಂಘದಿಂದ ವಿಶ್ವ ರೈತ ದಿನ ಆಚರಣೆ Kolar saaksha tv
ಕೋಲಾರ : ವಿಶ್ವ ರೈತ ದಿನ ಹಿನ್ನಲೆಯಲ್ಲಿ ಚಿನ್ನದನಾಡು ಕೋಲಾರದಲ್ಲಿ ರೈತ ಸಂಘದಿಂದ ವಿಶ್ವ ರೈತ ದಿನ ಆಚರಣೆ ಮಾಡಲಾಗಿದೆ.
ನಗರದ ಪತ್ರಕರ್ತರ ಭವನದಲ್ಲಿ ಕೆ.ಎಸ್ ಪುಟ್ಟಣ್ಣಯ ಬಣದ ವತಿಯಿಂದ ಆಚರಣೆ ಮಾಡಲಾಗಿದೆ.
ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾದ್ಯಕ್ಷರಾದ ಮರಗಲ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಶೇಷ ಅಂದರೇ ಈ ಕಾರ್ಯಕ್ರಮದಲ್ಲಿ ಅಪ್ಪು ಫೋಟೋಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಇನ್ನು ಈ ಕಾರ್ಯಕ್ರಮದಲ್ಲಿ ರೈತ ಸೇನೆಯ ಕಾರ್ಯಕರ್ತರು ಹಾಗೂ ನೂರಾರು ರೈತರು ಭಾಗಿಯಾಗಿದ್ದರು.









