ವಿಶ್ವ ಕೈ ನೈರ್ಮಲ್ಯ ದಿನ 2022 – ನಿರ್ಲಕ್ಷಿಸಬೇಡಿ, ಕೈ ಯಾವಾಗ ಎಷ್ಟು ಸಮಯ ತೊಳೆಯಬೇಕು ಎಂಬುದನ್ನ ತಿಳಿಯಿರಿ…

1 min read

ಕೈ ನೈರ್ಮಲ್ಯ ದಿನ 2022 – ನಿರ್ಲಕ್ಷಿಸಬೇಡಿ, ಕೈ ಯಾವಾಗ ಎಷ್ಟು ಸಮಯ ತೊಳೆಯಬೇಕು ಎಂಬುದನ್ನ ತಿಳಿಯಿರಿ…

ವಿಶ್ವ ಕೈ ನೈರ್ಮಲ್ಯ ದಿನ 2022: ಕನ್ನಡದಲ್ಲೊಂದು ಗಾದೆ ಮಾತಿದೆ “ಕೈ  ಬಾಯಿ ಶುದ್ಧವಾಗಿರಬೇಕು” ಅಂತ ಇದು ವ್ಯಕ್ತಿತ್ವ ಚೆನ್ನಾಗಿರಬೇಕು ಎನ್ನುವ ಗಾದೆಯಾದರೂ ಇವತ್ತಿಗೆ ಈ ಗಾದೆ ತುಂಬಾ ಸೂಕ್ತವಾಗುತ್ತೆ, ಯಾಕೆಂದರೆ ಇಂದು ವಿಶ್ವ ಕೈ ನೈರ್ಮಲ್ಯ ದಿನ.

ವಿಶ್ವ ಕೈ ನೈರ್ಮಲ್ಯ ದಿನವನ್ನು ಪ್ರತಿ ವರ್ಷ ಮೇ 5 ರಂದು ಆಚರಿಸಲಾಗುತ್ತದೆ, ಸ್ವಸ್ಥ್ಯ ಮತ್ತು ಆರೋಗ್ಯಯುತ ಜೀವನಶೈಲಿಗಾಗಿ ದಿನಕ್ಕೆ ಹಲವಾರು ಬಾರಿ ನಮ್ಮ ಕೈಗಳನ್ನ ತೊಳೆದುಕೊಳ್ಳುವುದು ಬಹುಮುಖ್ಯ.  COVID-19 ಹರಡಿದ ನಂತರ ಕೈ ತೊಳೆಯುವ ಪ್ರಾಮುಖ್ಯತೆ ಹತ್ತು ಪಟ್ಟು ಹೆಚ್ಚಾಗಿದೆ.

ದಿನವಿಡೀ ನೀವು ಯಾವುದೇ ವಸ್ತುವಿನ  ಮೇಲ್ಮೈಗಳನ್ನ ಸ್ಪರ್ಶಿಸಿದಾಗ ಸೂಕ್ಷ್ಮಜೀವಿಗಳು ನಿಮ್ಮ ಕೈಯಲ್ಲಿ ಕುಳಿತುಕೊಳ್ಳುತ್ತವೆ.  ಈ ಸೂಕ್ಷ್ಮಾಣುಗಳನ್ನು ಇತರರಿಗೆ ಹರಡಬಹುದು ಅಥವಾ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ನಿಮ್ಮನ್ನು ಸೋಂಕಿಸಬಹುದು. ನಿಮ್ಮ ಕೈಗಳನ್ನು ರೋಗಾಣು ಮುಕ್ತವಾಗಿಡುವುದು ಅಸಾಧ್ಯವಾದರೂ, ಸಾಮಾನ್ಯ ಶೀತದಿಂದ ಹಿಡಿದು ಮೆನಿಂಜೈಟಿಸ್, ಅತಿಸಾರ, ಬ್ರಾಂಕಿಯೋಲೈಟಿಸ್, ಫ್ಲೂ, ಹೆಪಟೈಟಿಸ್ ಎ ಮತ್ತು ವಿವಿಧ ರೀತಿಯ ಗಂಭೀರ ಸೋಂಕುಗಳವರೆಗೆ ವಿವಿಧ ರೋಗಗಳ ಹರಡುವಿಕೆಯ ವಿರುದ್ಧ ಕೈ ತೊಳೆಯುವುದು ಮೊದಲ ರಕ್ಷಣೆಯಾಗಿದೆ.

ಯಾವಾಗ ಕೈ ತೊಳೆಯಬೇಕು ?

ಅಡುಗೆ ಮತ್ತು  ಊಟದ ಮೊದಲು

ನೀವು ಅನಾರೋಗ್ಯಗೊಂಡ ವ್ಯಕ್ತಿ ಅಥವಾ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದರೆ.

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವಾಗ ಮತ್ತು ತೆಗೆಯುವಾಗ

ಶೌಚಾಲಯವನ್ನು ಬಳಸಿದ ನಂತರ

ಸೀನುವಿಕೆ, ಕೆಮ್ಮು ಇತ್ಯಾದಿಗಳ ನಂತರ ಕೈಗಳನ್ನು ತೊಳೆಯಿರಿ.

ಕೈ ತೊಳೆಯುವುದರ ಪ್ರಾಮುಖ್ಯತೆ :

  1. ವಾಟರ್ ಏಡ್ ಪ್ರಕಾರ, ಪ್ರತಿ ವರ್ಷ, ನೀರಿನ ಸಂಬಂಧಿತ ಕಾಯಿಲೆಗಳು ಮತ್ತು ಕೈ ನೈರ್ಮಲ್ಯದ ಕೊರತೆಯಿಂದಾಗಿ ಪ್ರಪಂಚದಾದ್ಯಂತ 443 ಮಿಲಿಯನ್ ಶಾಲಾ ದಿನಗಳು ತಪ್ಪಿಹೋಗಿವೆ.
  2. ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು ಒಂದು ಲಕ್ಷ ಮಕ್ಕಳು ಅತಿಸಾರದಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. UNICEF ಪ್ರಕಾರ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ 40 % ಕಡಿಮೆ ಮಾಡಬಹುದು.
  3. ಜಠರ ಮತ್ತು ಕರುಳಿನ ಸಮಸ್ಯೆಗಳಿರುವ ಜನರ ಸಂಖ್ಯೆ 29-57% ಕಡಿತವಾಗುತ್ತದೆ.
  4. ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರ ಸಂಖ್ಯೆಯನ್ನ ಕಡಿಮೆ ಮಾಡಬಹುದು.

ಎಷ್ಟು ಹೊತ್ತು ಕೈ ತೊಳೆಯಬೇಕು?

ನೀರು ಮತ್ತು ಸೋಪಿನ ಸಹಾಯದಿಂದ ಕೈಗಳನ್ನು ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಬೇಕು. ವಿಶೇಷವಾಗಿ ಶೌಚಾಲಯ ಬಳಸಿದ ನಂತರ, ಆಹಾರ ಸೇವಿಸುವ ಮೊದಲು, ಸೀನುವಿಕೆ ಅಥವಾ ಕೆಮ್ಮಿನ ನಂತರ ಅಥವಾ ಕೈಗಳು ಕೊಳಕು ಕಾಣಿಸಿಕೊಂಡಾಗ ಕೈ ತೊಳೆಯಬೇಕು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd