ಓಸ್ಲೋ: ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ (Praggnanandhaa) ವಿಶ್ವದ ನಂ.1 ಚೆಸ್ ಮಾಸ್ಟರ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ (Magnus Carlsen) ಸೋಲಿಸಿ ಸಾಧನೆ ಮೆರೆದಿದ್ದಾರೆ.
ನಾರ್ವೆ ಚೆಸ್ ಟೂರ್ನಿಯ (Norway Chess Tournament) 3ನೇ ಸುತ್ತಿನಲ್ಲಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ. ಇದು 6 ಬಾರಿ ವಿಶ್ವ ಚೆಸ್ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವಾಗಿದೆ. ಪ್ರಜ್ಞಾನಂದ 5.5 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಕಾರ್ಲ್‌ಸನ್ 3 ಪಾಯಿಂಟ್‌ಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಹಿಂದಿನ ವರ್ಷ ಅಝರ್ಬೈಜಾನ್ನ ಬಾಕುವಿನಲ್ಲಿ ನಡೆದಿದ್ದ ಚೆಸ್ ವಿಶ್ವಕಪ್ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧವೇ ಗೆಲುವು ಸಾಧಿಸಿ ಮ್ಯಾಗ್ನಸ್ ಕಾರ್ಲ್‌ಸೆನ್ 6ನೇ ಬಾರಿಗೆ ಚಾಂಪಿಯನ್ ಆಗಿದ್ದರು. ಆದರೆ, ಈ ಬಾರಿ ಭಾರತೀಯ ಆಟಗಾರ ಪ್ರಜ್ಞಾನಂದ ಸೇಡು ತೀರಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಭಾರತದ ಯುವ ಆಟಗಾರ್ತಿ, ಪ್ರಜ್ಞಾನಂದ ಅವರ ಸಹೋದರಿ, ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಮತ್ತೋರ್ವ ಭಾರತೀಯ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.