World Record: ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಸರಿಗಟ್ಟಿದ ಜೋಶುವಾ ಡಸಿಲ್ವಾ
ವೆಸ್ಟ್ ಇಂಡೀಸ್ ತಂಡದ ಯುವ ವಿಕೆಟ್ ಕೀಪರ್ ಜೋಶುವಾ ಡಸಿಲ್ವಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಸರಿಗಟ್ಟುವ ಮೂಲಕ ಎಲೈಟ್ ಲಿಸ್ಟ್ ಸೇರ್ಪಡೆಗೊಂಡಿದ್ದಾರೆ.
ಸೌತ್ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಜೋಶುವಾ ಡಸಿಲ್ವಾ ಈ ಸಾಧನೆ ಮಾಡಿದ್ದು, ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಡಿಸ್ಮಿಸಲ್ಸ್‌ಗಳನ್ನ ಮಾಡಿದ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಸೌತ್ ಆಫ್ರಿಕಾ ವಿರುದ್ದ ಪ್ರಥಮ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಡಸಿಲ್ವಾ, ಒಟ್ಟು 7 ಕ್ಯಾಚ್‌ಗಳನ್ನ ಪಡೆದುಕೊಂಡರು.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಡಿಸ್ಮಿಸಲ್ಸ್‌ಗಳನ್ನ ಪಡೆದ ವಿಕೆಟ್ ಕೀಪರ್‌ಗಳ ಪಟ್ಟಿ ಸೇರಿದರು. ಜೋಶುವಾ ಡಸಿಲ್ವಾ ಅವರಿಗೂ ಮುನ್ನ ನಾಲ್ವರು ವಿಕೆಟ್ ಕೀಪರ್‌ಗಳು ಈ ದಾಖಲೆ ಮಾಡಿದ್ದಾರೆ.
ವಸೀಂ ಭರಿ, ಬಾಬ್ ಟೇಲರ್, ಇಯಾನ್ ಸ್ಮಿತ್ ಹಾಗೂ ರಿಡ್ಲಿ ಜೇಕಬ್ಸ್ ಅವರುಗಳು ತಲಾ 7 ಡಿಸ್ಮಿಸಲ್ಸ್‌ಗಳನ್ನ ಮಾಡಿದ ದಾಖಲೆ ಹೊಂದಿದ್ದಾರೆ.
ಜೋಶುವಾ ಡಸಿಲ್ವಾ ಕಳೆದ ಎರಡು ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಆಗಿ ಆಡುತ್ತಿದ್ದಾರೆ.
World Record , test cricket , world record