Britain-queen-elizabeth-ii | ಹೊಸ ದಾಖಲೆ ಸೃಷ್ಠಿಸಿದ ಬ್ರಿಟನ್ ರಾಣಿ ಎಲಿಜಬೆತ್ – 2
ಲಂಡನ್ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ (96) ಭಾನುವಾರ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಥಾಯ್ಲೆಂಡ್‌ನ ಮಾಜಿ ದೊರೆ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಕ್ಕೆ ತಳ್ಳಿ ಅತಿ ಹೆಚ್ಚು ಕಾಳ ಆಳ್ವಿಕೆ ನಡೆಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಭೂಮಿಬೋಲ್ ಅವರು 1927 ಮತ್ತು 2016 ರ ನಡುವೆ 70 ವರ್ಷಗಳ 126 ದಿನಗಳ ಕಾಲ ರಾಜರಾಗಿದ್ದರು.

ಲೂಯಿಸ್ 14 ಫ್ರಾನ್ಸ್ ಅನ್ನು 1643 ರಿಂದ 1715 ರವರೆಗೆ 72 ವರ್ಷ ಮತ್ತು 110 ದಿನಗಳವರೆಗೆ ಆಳಿದ್ದರು.
ಎಲಿಜಬೆತ್ II 1953 ರಲ್ಲಿ ಸಿಂಹಾಸನವನ್ನು ಏರಿದರು.
ಬ್ರಿಟನ್ ಅನ್ನು ಸುದೀರ್ಘ ಕಾಲ ಆಳಿದ ರಾಣಿ ವಿಕ್ಟೋರಿಯಾ ಅವರ ದಾಖಲೆಯನ್ನು 2015ರಲ್ಲಿ ಎಲಿಜಬೆತ್ 2 ಮುರಿದಿದ್ದರು.
ಆಕೆಯ ಆಳ್ವಿಕೆಯ 70 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಇಂಗ್ಲೆಂಡ್‌ನಲ್ಲಿ ವಾರದ ಕಾಲ ಆಚರಣೆಗಳನ್ನು ನಡೆಸಲಾಯಿತು.
ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆ ಸಂಭ್ರಮದಲ್ಲಿ ರಾಣಿ ಭಾಗಿಯಾಗಿರಲಿಲ್ಲ. ಹೀಗಾಗಿ ಪತ್ರ ಬರೆದಿರುವ ಅವರು, ಧನ್ಯವಾದ ಹೇಳಿದ್ದಾರೆ.