ಬೆಂಗಳೂರು, ಸೆ.22: ವಿಶ್ವದಲ್ಲೇ ಮೊದಲ ಬಾರಿ ಕರಡಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿ ಕೃತಕ ಕಾಲು ಜೋಡಣೆ ಮಾಡಿದ ಹೆಗ್ಗಳಿಕೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (Bannerghatta National Park) ವಸಿಕರನ್ ಹೆಸರಿನ ಕರಡಿ (Bear) ಪಾತ್ರವಾಗಿದೆ. ಬಳ್ಳಾರಿ ಜಿಲ್ಲೆಯ ಅರಣ್ಯ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಕರಡಿಯ ಹಿಂಬದಿ ಎಡಗಾಲು ಮುರಿದು ನಡೆಯಲು ಆಗದ ಪರಿಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವೆಸಿಕರನ್‌ನನ್ನು ರಕ್ಷಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕರೆ ತರಲಾಗಿತ್ತು.
ಹಿಂದಿನ ಎಡಗಾಲು ಮುರಿತಗೊಂಡಿದ್ದ ಕರಡಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಮೂರು ಕಾಲಿನಲ್ಲಿ ನಡೆಯುವ ಅಭ್ಯಾಸ ರೂಢಿಸಿ ಕೊಳ್ಳುತ್ತಿತ್ತು. 2025ರಲ್ಲಿ ಜನವರಿಯಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರಾಣಿಗಳ ಜಾಗತಿಕ ಮೂಳ ತಜ್ಞ ಅಮೆರಿಕದ ಡೆರಿಕ್ ಕಂದ ನಾ ವಸಿಕರನ್ ನಡಿಗೆಯನ್ನು ಗಮನಿಸಿದ್ದರು.
ಇದನ್ನೂ ಓದಿ: ಮೂರು ವರ್ಷಗಳಲ್ಲಿ 9 ಸರ್ಕಾರಿ ಹುದ್ದೆಗಳನ್ನು ಗಳಿಸಿದ ಪಲ್ಲವಿ ಹೊಸಮನಿ
ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ವೈಲ್ಡ್ ಲೈಫ್ ಎಸ್.ಓ.ಎಸ್ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ಕೃತಕ ಕಾಲಿನ ಅಚ್ಚು ಪರೀಕ್ಷೆ, ಅದನ್ನು ಲಯಬದ್ಧವಾಗಿ ಜೋಡಣೆ ಕಾರ್ಯ ಪರಿಕ್ಷಿಸಿದ ಬಳಿಕ ವಸಿಕರನ್ ಕೃತಕ ನೆರವೇರಿಸಲಾಯಿತು. ಯಶಸ್ವಿಯಾಗಿ ನೆರವೇರಿಸಲಾಯಿತು.
ಬೇರೆ ಪ್ರಾಣಿಗಳಂತೆ ಕರಡಿಗೆ ಕೃತಕ ಜೋಡಣೆ ಸವಾಲಿನ ಕೆಲಸವಾಗಿತ್ತು. ಜೋಡಣೆ ಬಳಿಕ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವ ಟಿಕೆಗಳಲ್ಲಿ ಸಕ್ರಿಯವಾಗಿರುವುದು ನೆಮ್ಮದಿಯ ವಿಚಾರ ಎಂದು ಪ್ರಾಣಿಗಳ ಜಾಗತಿಕ ಮೂಳೆ ತಜ್ಞ ಅಮೆರಿಕದ ಡೆರಿಕ್ ಕಂಪನಾ ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








