WPL 2023 : ಮಹಿಳಾ ಕ್ರಿಕೆಟ್ ಹೊಸದಂದು ಯುಗದ ಆರಂಭಕ್ಕೆ ಕ್ಷಣಗಣನೆ…
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ಯುಗ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಮೊದಲ ಸೀಸನ್ ಮೊದಲ ಪಂದ್ಯಕ್ಕೆ ಇಂದು ವಿದ್ಯುಕ್ತ ಉದ್ಘಾಟನೆ ನಡೆಯಲಿದೆ. 23 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಐದು ತಂಡಗಳು 22 ಪಂದ್ಯಗಳನ್ನ ಆಡಲಿವೆ. ಒಟ್ಟು 87 ಮಹಿಳಾ ಕ್ರಿಕೆಟಿಗರು ಇದರ ಭಾಗವಾಗಲಿದ್ದಾರೆ.
ವಿಶ್ವದರ್ಜೆಯ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಕ್ರಿಕೆಟ್ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಲಿದೆ. ಇಂದು ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಇದೇ ತಿಂಗಳ 26ರಂದು ಫೈನಲ್ ಪಂದ್ಯ ನಡೆಯಲಿದೆ. ಐದು ತಂಡಗಳು ಪೈನಲ್ ಪಂದ್ಯಕ್ಕೆ ಕಣ್ಣಿಟ್ಟಿವೆ.
ಮುಂಬೈ (ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್), ಬೆಂಗಳೂರು (ಕ್ಯಾಪ್ಟನ್ ಸ್ಮೃತಿ ಮಂಧಾನ), ಗುಜರಾತ್ (ಕ್ಯಾಪ್ಟನ್ ಬೆತ್ ಮೂನಿ), ಯುಪಿ (ಕ್ಯಾಪ್ಟನ್ ಅಲಿಸಾ ಹೀಲಿ) ಮತ್ತು ಡೆಲ್ಲಿ (ಕ್ಯಾಪ್ಟನ್ ಮೆಗ್ ಲ್ಯಾನಿಂಗ್) WPL ನ ಮೊದಲ ಋತುವಿನಲ್ಲಿ ಸ್ಪರ್ಧಿಸಲಿದ್ದಾರೆ. ಇಂದು ಮೊದಲ ಪಂದ್ಯ ಗುಜರಾತ್ ಮತ್ತು ಮುಂಬೈ ತಂಡಗಳ ನಡುವೆ ನಡೆಯಲಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭಕ್ಕೆ ಎರಡು ಗಂಟೆ ಮೊದಲು ಉದ್ಘಾಟನಾ ಸಮಾರಂಭವಿದ್ದು ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ವಿಶೇಷ ಪ್ರದರ್ಶನ ನೀಡಲಿದ್ದಾರೆ.
ಬಿಸಿಸಿಐ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಈ ಋತುವಿನಲ್ಲಿ ಎಲ್ಲಾ ಪಂದ್ಯಗಳನ್ನ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ನೀಡುತ್ತಿದೆ. ಮಹಿಳೆಯರು ಯಾವುದೇ ಹಣವನ್ನು ಪಾವತಿಸದೆ ಕ್ರೀಡಾಂಗಣಗಳಿಗೆ ಹೋಗಿ ನೇರ ಪಂದ್ಯಗಳನ್ನು ವೀಕ್ಷಿಸಬಹುದು. ಈ WPL ಪಂದ್ಯದ ದಿನದಂದು ಪಂದ್ಯವು 7.30 PM ಕ್ಕೆ ಪ್ರಾರಂಭವಾಗುತ್ತದೆ. ಎರಡು ಪಂದ್ಯಗಳ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಎರಡನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.
WPL 2023: Countdown to the start of a new era for women’s cricket…