WPL 2023 Final : ಫೈನಲ್ ಪಂದ್ಯದ ಕಾದಾಟಕ್ಕೆ ಮುಂಬೈ, ದೆಹಲಿ ಸಜ್ಜು….
ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಸೀಸನ್ ನ ಮೊದಲ ಪೈನಲ್ ಪಂದ್ಯಕ್ಕೆ ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರಾತ್ರಿ 7:30 ಕ್ಕೆ ಆರಂಭವಾಗಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಮೂರನೇ ಬಾರಿ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮುನ್ನ ಲೀಗ್ ಹಂತದಲ್ಲಿ ಒಮ್ಮೆ ಮುಂಬೈ ಹಾಗೂ ಒಮ್ಮೆ ದೆಹಲಿ ತಂಡಗಳು ಗೆಲುವು ಸಾಧಿಸಿದ್ದವು.
ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ತಂಡ ನೇರವಾಗಿ ಫೈನಲ್ ತಲುಪಿದೆ. ಟೂರ್ನಿಯಲ್ಲಿ ಗುಜರಾತ್ ಮತ್ತು ಮುಂಬೈ ತಂಡಗಳಿಗೆ ಮಾತ್ರ ದೆಹಲಿಯನ್ನ ಸೋಲಿಸಲು ಸಾಧ್ಯವಾಗಿದೆ. ಉಳಿದೆಲ್ಲ ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿತ್ತು.
ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟೂರ್ನಿಯ ಟಾಪ್ ರನ್ ಸ್ಕೋರರ್ ಆಗಿದ್ದಾರೆ. ಮರಿಯನ್ ಕ್ಯಾಪ್ ತನ್ನ ಆಲ್ ರೌಂಡರ್ ಪ್ರದರ್ಶನದಿಂದ ದೆಹಲಿಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇವರಲ್ಲದೆ, ಆಲಿಸ್ ಕ್ಯಾಪ್ಸೆ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್, ತಾರಾ ನಾರ್ರಿಸ್ ಮತ್ತು ಶಿಖಾ ಪಾಂಡೆ ಕೂಡ ತಂಡದ ಗೆಲುವಿಗೆ ಕೊಡುಡೆ ನೀಡಿದ್ದಾರೆ.
ಪಂದ್ಯಾವಳಿಯ ಲೀಗ್ ಹಂತದಲ್ಲಿ ಮುಂಬೈ ಕೂಡ 6 ಪಂದ್ಯಗಳನ್ನ ಗೆದ್ದಿತ್ತು. ಆದರೇ ಕಡಿಮೆ ರನ್ ರೇಟ್ ನಿಂದಾಗಿ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಯುಪಿ ವಾರಿಯರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಮುಂಬೈ ಲೀಗ್ ಹಂತದಲ್ಲಿ ಯುಪಿ ಮತ್ತು ದೆಹಲಿ ವಿರುದ್ಧ ಮಾತ್ರ ತಲಾ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ನಟಾಲಿ ಸೀವರ್ ಬ್ರಂಟ್ ಮತ್ತು ಹ್ಯಾಲಿ ಮ್ಯಾಥ್ಯೂಸ್ ತಂಡದ ಟಾಪ್ 2 ಆಟಗಾರರಾಗಿದ್ದಾರೆ. ಇವರಲ್ಲದೆ ಸೈಕಾ ಇಶಾಕ್, ಇಸಾಬೆಲ್ ವಾಂಗ್ ಮತ್ತು ಅಮೆಲಿಯಾ ಕೆರ್ ಕೂಡ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯ ಟಾಪ್-5 ಬೌಲರ್‌ಗಳ ಪೈಕಿ 4 ಮಂದಿ ಮುಂಬೈನವರು.
ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್-11
ದೆಹಲಿಕ್ಯಾಪಿಟಲ್ಸ್ : ಮೆಗ್ ಲ್ಯಾನಿಂಗ್ (ಸಿ), ಶಫಾಲಿ ವರ್ಮಾ, ಮರಿಯನ್ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ಶಿಖಾ ಪಾಂಡೆ, ತಾನಿಯಾ ಭಾಟಿಯಾ (ವಾಕ್), ರಾಧಾ ಯಾದವ್, ತಾರಾ ನಾರ್ರಿಸ್ ಮತ್ತು ಅರುಂಧತಿ ರೆಡ್ಡಿ.
ಮುಂಬೈ ಇಂಡಿಯನ್ಸ್ : ಹರ್ಮನ್‌ಪ್ರೀತ್ ಕೌರ್ (ಸಿ), ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಾಕ್), ನಟಾಲಿ ಸಿವರ್ ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸಾಬೆಲ್ ವಾಂಗ್, ಅಮನ್‌ಜೋತ್ ಕೌರ್, ಜಿಂಟಿಮಣಿ ಕಲಿತಾ, ಹುಮೈರಾ ಕಾಜಿ ಮತ್ತು ಸೈಕಾ ಇಶಾಕ್.
WPL 2023 Final: Mumbai, Delhi gear up for the final match…