WPL 2023 : ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತರೂ RCB ‘ಎಲಿಮಿನೇಟರ್’ ಗೆ ಅರ್ಹತೆ ಪಡೆಯುವುದು ಹೇಗೆ…?
ಪುರುಷರ ತಂಡದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವೂ ನಿರಾಸೆ ಅನುಭವಿಸುತ್ತಿದೆ. ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ( WPL) ಮಹಿಳಾ ಪ್ರೀಮಿಯರ್ ಲೀಗ್ ನ ಒಂದೇ ಒಂದು ಪಂದ್ಯವನ್ನು ಗೆಲ್ಲಲು RCB ಗೆ ಸಾಧ್ಯವಾಗಿಲ್ಲ. ಕಳೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಎದುರು 10 ವಿಕೆಟ್ ಗಳಿಂದ ಸೋತಿದೆ..
ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂಧಾನ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.. ಸತತ ನಾಲ್ಕು ಪಂದ್ಯಗಳನ್ನ ಈಗಾಗಲೇ RCB ಮಹಿಳಾ ತಂಡ ಸೋತಿರುವುದು ಅಭಿಮಾನಿಗಳನ್ನ ಭಾರೀ ನಿರಾಸೆಗೊಳಿಸಿದೆ..
ಮಾರ್ಚ್ 10, 2023 ರಂದು ಯುಪಿ ವಾರಿಯರ್ಜ್ ವಿರುದ್ಧ ಮತ್ತೊಂದು ಪಂದ್ಯದಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ತೋರುತ್ತಿಲ್ಲ..
ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ RCB ಇದೆ..
ಇಷ್ಟಾದ ನಂತರವೂ RCB ಎಲಿಮಿನೇಟರ್ ಪ್ರವೇಶ ಸಾಧ್ಯವೇ..??
ರಾಯಲ್ ಚಾಲೆಂಜರ್ಸ್ ಬೆಂಗಳೂರುಗೆ ಅರ್ಹತೆಯ ಸನ್ನಿವೇಶವು ತುಂಬಾ ಕಷ್ಟಕರವಾಗಿದೆ.
ಏಕೆಂದರೆ RCB ಗೆ ಈಗ ಕೇವಲ ನಾಲ್ಕು ಪಂದ್ಯಗಳು ಮಾತ್ರ ಬಾಕಿ ಉಳಿದಿದೆ..
WPL ಮೊದಲ ಆವೃತ್ತಿಯಲ್ಲಿ ಇನ್ನೇನು RCB ಮನೆಗೆ ಹೊರಟಿದೆ ಎಂದು ಕಾಣಬಹುದು.. ಆದ್ರೆ ಪಂದ್ಯಾವಳಿಯಲ್ಲಿ ಲೆಕ್ಕಾಚಾರದ ಪ್ರಕಾರ ಇನ್ನೂ RCB ಎಲಿಮಿನೇಟರ್ ಪ್ರವೇಶದ ಕನಸು ಜೀವಂತವಾಗಿದೆ.
ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2023 ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಮೊದಲ ನಾಲ್ಕು ಪಂದ್ಯಗಳನ್ನ ಸೋತಿದೆ. ಈಗ ಅವರು ಉಳಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಗೆ ಅರ್ಹತೆ ಪಡೆಯುವ ಮೊದಲ ಸನ್ನಿವೇಶವೆಂದರೆ ಅವರು ತಮ್ಮ ಉಳಿದ ನಾಲ್ಕು ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲುಬೇಕು ಮತ್ತು ಇತರ ತಂಡಗಳ ಫಲಿತಾಂಶಗಳು ತಮ್ಮ ಪರವಾಗಿ ಹೋಗುವಂತೆ ಆಗಬೇಕಿದೆ..
RCB ಉಳಿದಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆಲ್ಲುವುದರಿಂದ ಅವರು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಹಿಂಬಾಲಿಸಬಹುದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪಿಟಲ್ಸ್, ಯುಪಿ ವಾರಿಯರ್ಜ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು.
ಸ್ಮೃತಿ ಮಂಧಾನ ನೇತೃತ್ವದ RCB ತಂಡದಲ್ಲಿ ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರಂತಹ ಅನೇಕ ದೊಡ್ಡ ಸ್ಟಾರ್ ಗಳಿದ್ದಾರೆ.. ಆದ್ರೂ ಒಂದೂ ಪಂದ್ಯವನ್ನು ಗೆಲ್ಲದೇ ಇರುವುದು ದುರಾದೃಷ್ಟ ಎನ್ನಬಹುದು…
WPL 2023 : How can RCB qualify for ‘Eliminator’ despite losing first four matches…?