WPL 2023: ಬಲಿಷ್ಠ ಮುಂಬೈಗೆ RCB ಸವಾಲು – ಗೆಲ್ಲುವ ಒತ್ತಡದಲ್ಲಿ ಸ್ಮೃತಿ ಬಳಗ….
ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಯುತ್ತಿದೆ. ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ರಾತ್ರಿ 7:30 ರಿಂದ ಪಂದ್ಯ ಶುರುವಾಗಲಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನ ಗುಜರಾತ್ ವಿರುದ್ಧ ಗೆದ್ದು ಬೀಗಿದೆ. ಆದರೇ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಎಡವಿದ್ದು ಸೋಲಿನೊಂದಿಗೆ ಲೀಗ್ ಪ್ರಾರಂಭಿಸಿದೆ.
ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ತಂಡವನ್ನ 143 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ 216.66 ಸ್ಟ್ರೈಕ್ ರೇಟ್‌ನಲ್ಲಿ 14 ಬೌಂಡರಿಗಳ ಸಹಾಯದಿಂದ 65 ರನ್ ಗಳಿಸಿ ಲೀಗ್ ನಲ್ಲಿ ಮೊದಲ ಅರ್ಧಶತಕ ದಾಖಲಿಸಿದ್ದರು.
ಮುಂಬೈ ಅತ್ಯಂತ ಸಮತೋಲಿತ ತಂಡವಾಗಿದ್ದು, ವಿದೇಶಿ ಆಟಗಾರರಾದ ಅಮೆಲಿಯಾ ಕೆರ್, ನಟಾಲಿ ಸ್ಕೈವರ್ ಮತ್ತು ಹೀದರ್ ಗ್ರಹಾಂ ಯಾವುದೇ ಸಮಯದಲ್ಲಿ ಆಟ ಬದಲಿಸಬಹುದಾದ ಚಾಣಾಕ್ಷತೆಯನ್ನ ಹೊಂದಿದ್ದಾರೆ. ಬೌಲಿಂಗ್
ಇನ್ನೂ ಆರ್ ಸಿ ಬಿ ಬಗ್ಗೆ ಮಾತನಾಡುವುದಾದರೇ ತಂಡದಲ್ಲಿ ಹೆಸರಾಂತ ಆಟಗಾರರಿದ್ದರೂ ಪ್ರದರ್ಶನ ಬರಬೇಕಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 60 ರನ್ ಗಳಿಂದ ಸೋಲೊಪ್ಪಿಕೊಂಡಿತು. ಬೌಲಿಂಗ್ ನಲ್ಲಿ ಕಳೆಪ ಪ್ರದರ್ಶನ ತೋರಿದ ತಂಡ ಬ್ಯಾಟಿಂಗ್ ನಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ.
ಪಿಚ್ ವರದಿ
WPL 2023 ನಡೆಯುತ್ತಿರುವ ಎರಡೂ ಪಿಚ್ ಗಳು ಸ್ಕೋರಿಂಗ್ ಪಿಚ್ ಗಳಾಗಿವೆ. ಮೊದಲು ಬ್ಯಾಟ್ ಮಾಡಿದ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡೂ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಸ್ಕೋರ್ 200+ ದಾಟಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್ ಮಾಡಲು ಬಯಸುತ್ತದೆ.
ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI…
ಮುಂಬೈ ಇಂಡಿಯನ್ಸ್: ಹರ್ಮನ್‌ಪ್ರೀತ್ ಕೌರ್ (ಸಿ), ಯಾಸ್ತಿಕಾ ಭಾಟಿಯಾ (ವಾಕ್), ನಟಾಲಿ ಸಿವರ್ ಬ್ರಂಟ್, ಹೇಲಿ ಮ್ಯಾಥ್ಯೂಸ್, ಪೂಜಾ ವಸ್ತ್ರಾಕರ್, ಇಸಾಬೆಲ್ ವಾಂಗ್, ಹುಮೈರಾ ಕಾಜಿ, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಜಿಂಟಿಮಣಿ ಕಲಿತಾ ಮತ್ತು ಸೈಕಾ ಇಶಾಕ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್, ಕನಿಕಾ ಅಹುಜಾ, ಆಶಾ ಶೋಭನಾ, ಪ್ರೀತಿ ಬೋಸ್, ಮೇಗನ್ ಶುಟ್ ಮತ್ತು ರೇಣುಕಾ ಸಿಂಗ್.
WPL 2023: RCB challenge strong Mumbai – Smriti Balag under pressure to win….