WPL 2023 : ಸೋಫಿ ವಿದ್ವಂಸಕ ಬ್ಯಾಟಿಂಗ್ ; ಬೆಂಗಳೂರಿಗೆ ಸತತ ಎರಡನೇ ಗೆಲುವು….
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ನಿನ್ನೆ ಶನಿವಾರ ರಾಯಲ್ ಚಾಲೆಂಜರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ನಿನ್ನೆ ನಡಡೆ ಆಟದಲ್ಲಿ ಆರ್ ಸಿ ಬಿ ಹುಡುಗಿಯರು ಅಕ್ಷರಶಃ ಅಬ್ಬರಿಸಿ ಗುಜರಾತ್ ನಿಂದ ಗೆಲುವು ಕಸಿದುಕೊಂಡಿದ್ದಾರೆ. ಸತತ ಐದು ಪಂದ್ಯ ಸೋತ ಬಳಿಕ ಕಂಬ್ಯಾಕ್ ಮಾಡಿರುವ ಆರ್ ಸಿ ಬಿ ಗೆಲುವಿನ ನಾಗಲೋಟ ಕಾಲಿಟ್ಟಿದೆ. ಸತತ ಎರಡನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತ್ತು. ಗುಜರಾತ್ ನೀಡಿದ 189 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಆರ್ ಸಿ ಬಿ 15.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
RCB ಪರ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲಿನಿಂದ ಔಟ್ ಆಗುವರೆಗೂ ಗುಡುಗು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಸೋಫಿ ಬ್ಯಾಟಿಂಗ್ ನಲ್ಲಿ ಗೇಲ್ ಮತ್ತು ಎಬಿಡಿ ಆಟವನ್ನ ನೆನಪಿಸಿದರು. ಕೇವಲ 36 ರನ್ ಗಳಲ್ಲಿ 99 ರನ್ ಗಳಿಸಿ ಔಟ್ ಆಗುವ ಮೂಲಕ 1 ರನ್ ಗಳ ಅಂತರದಲ್ಲಿ ಶತಕದಿಂದ ವಂಚಿತರಾದರು. 9 ಬೌಂಡರಿ ಮತ್ತು 8 ಸಿಕ್ಸರ್ ಗಳ ಮೂಲಕ ಗುಜರಾತ್ ಬೌಲರಗಳನ್ನ ಚೆಂಡಾಡಿದರು.
ಒಂದು ತುದಿಯಲ್ಲಿ ಸೋಫಿ ವಿಧ್ವಂಸ ಸೃಷ್ಟಿಸಿದರೇ ಇನ್ನೊಂದು ತುದಿಯಲ್ಲಿ ನಾಯಕಿ ಸ್ಮೃತಿ ಮಂದನಾ 37 ರನ್ ಗಳಿಸಿ ಸಾಥ್ ನೀಡಿದರು. ಕೊನೆಯಲ್ಲಿ ಎಲಿಸ್ ಪೆರ್ರಿ (ಔಟಾಗದೆ 19) ಮತ್ತು ಹೀದರ್ ನೈಟ್ (ಅಜೇಯ 22) ಆರ್‌ಸಿಬಿ ಯನ್ನ ಗೆಲುವಿನ ದಡ ಮುಟ್ಟಿಸಿದರು.
ಸತತ ಐದು ಪಂದ್ಯಗಳಲ್ಲಿ ಸೋತಿರುವ ಆರ್ ಸಿಬಿ ಮಾರ್ಚ್ 15ರಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಗೆಲುವಿನ ನಾಗಾಲೋಟಕ್ಕೆ ಲಗ್ಗೆ ಇಟ್ಟಿತ್ತು. ಇದೀಗ ಗುಜರಾತ್ ವಿರುದ್ಧ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
WPL 2023 : Sophie Scholar Batting; Second win in a row for Bangalore….