WPL : RCB ಪುರುಷರ ತಂಡ ಗೆಲ್ಲಲು ಸಾಧ್ಯವಾಗದ ಕಪ್ ಮಹಿಳಾ ತಂಡ ಗೆಲ್ಲುತ್ತಾ..??
IPL 15 ಸೀಸನ್ ಗಳು ಕಳೆಯಿತು.. ಇನ್ನೇನು ಮಾರ್ಚ್ 31 ರಿಂದ 16 ನೇ ಸೀಸನ್ ಗ್ರ್ಯಾಂಡ್ ಆಗಿ ಆರಂಭವಾಗಲಿದೆ..
15 ಸೀಸನ್ ಗಳು ಮುಗಿದರೂ RCB ಕಪ್ ಗೆದ್ದಿಲ್ಲ , ಆದ್ರೂ ಪ್ರತಿ ಬಾರಿಯೂ ಅಭಿಮಾನಿಗಳು ‘ ಕಪ್ ನಮ್ದೇ ‘ ಅನ್ನೋದನ್ನ ಬಿಟ್ಟಿಲ್ಲ , RCB ಭಿಮಾನಿಗಳ ಸಂಖ್ಯೆ ಕುಸಿದಿಲ್ಲ,,,,
ಅಂತೆಯೇ ಈ ಬಾರಿಯೂ ಕಪ್ಈ ನಮ್ದೇ ಅನ್ನೋ ಟ್ರೆಮಡ್ ಮತ್ತೆ ಶುರುವಾಗೋದ್ರಲ್ಲಿ ಡೌಟೇ ಇಲ್ಲ..
ಈ ಸಲ ಕಪ್ ನಮ್ದೇ ಅನ್ನೋ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ..
ಅವರ ಭರವಸೆಯಂತೆ RCB ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ ಕಾದು ನೋಡ್ಬೇಕಿದೆ..
ಆದ್ರೆ #IPL2023 ಶುರುವಾಗೋದಕ್ಕೂ ಮೊದಲೇ ಮೊಟ್ಟ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ನಡೆಯಲಿದೆ.. ಮಹಿಳಾ ಪ್ರೀಮಿಯರ್ ಲೀಗ್ ನಲ್ಲೂ ಕೂಡ RCB ಸಖತ್ ಸೌಂಡ್ ಮಾಡ್ತಿದೆ..
ಸ್ಮೃತಿ ಮಂಧಾನಾ ನಾಯಕತ್ವದಲ್ಲಿ RCB ಚೊಚ್ಚಲ ಸೀಸನ್ ನಲ್ಲಿ ಚೊಚ್ಚಲ ಚಾಂಪಿಯನ್ ಟ್ರೋಫಿಗಾಗಿ ಹೋರಾಟ ಮಾಡಲಿದೆ..
ಇತ್ತ RCB ಅಭಿಮಾನಿಗಳು ಮಹಿಳಾ ತಂಡಕ್ಕೂ ಅಷ್ಟೇ ಪ್ರೀತಿ , ಅಭಿಮಾನವನ್ನ ತೋರಿಸುತ್ತಿದ್ದಾರೆ..
ಮಹಿಳಾ ತಂಡವಾದ್ರೂ ಕಪ್ ಗೆಲ್ಲುತ್ತಾ ಅನ್ನೋ ನಿರೀಕ್ಷೆ ಅಭಿಮಾನಿಗಳದ್ದು.
15 ಸೀಸನ್ ಗಳಿಂದ IPL ನಲ್ಲಿ RCB ಕಪ್ ಬರ ಎದುರಿಸುತ್ತಿದ್ದು , ಮಹಿಳಾ ತಂಡದಿಂದ ಕಪ್ ಅಭಿಮಾನಿಗಳು ಕಪ್ ಬರ ನೀಗುವ ನಿರೀಕ್ಷೆಯಲ್ಲಿದ್ದಾರೆ..
RCB ತಂಡವು ಬಲಶಾಲಿಯಾಗಿ ಕಾಣುತ್ತಿದೆ. ಸ್ಮೃತಿ ಮಂಧಾನ ನಾಯತ್ವದ ತಂಡದಲ್ಲಿ ಅಂತರಾಷ್ಟ್ರೀಯ ಸ್ಟಾರ್ ಆಟಗಾರ್ತಿಯರಿದ್ದಾರೆ..
ಇಂದು ( March 5 ) RCB ಮೊದಲನೇ ಪಂದ್ಯವಿದೆ. ದೆಹಲಿ ಕ್ಯಾಪಿಟಲ್ಸ್ ( Dehli Capitals ) ಜೊತೆಗೆ RCB ಸೆಣಸಾಡಲಿದೆ.. ಅಲ್ಲದೇ ಮ್ಯಾಚ್ ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ಭರವಸೆಯಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರು ಇದ್ದಾರೆ..
ಅಂದ್ಹಾಗೆ RCB ಗೆ ಮೆಂಟರ್ ಆಗಿ ಸಾನಿಯಾ ಮಿರ್ಜಾ RCB ತಂಡವನ್ನ ಹುರಿದುಂಬಿಸುತ್ತಿದ್ದಾರೆ.
ತಂಡವು ಸ್ಮೃತಿ ಮಂಧಾನ, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಹೀದರ್ ನೈಟ್, ಡೇನ್ ವ್ಯಾನ್ ನೀಕರ್ಕ್ ಮತ್ತು ಮೇಗನ್ ಶುಟ್ ಅವರಂತಹ ಅದ್ಭುತ ಆಟಗಾರರು ತಂಡದಲ್ಲಿದ್ದಾರೆ..
ಹಾಗೆ ನೋಡಿದ್ರೆ RCBಯಲ್ಲಿ ಸ್ಪಿನ್-ಬೌಲಿಂಗ್ ನ ಾಯ್ಕೆಯ ಕೊರೆತ ಕಾಣುತ್ತಿದೆ..
ಅನುಭವವಿಲ್ಲದ ಇಬ್ಬರು ಭಾರತೀಯ ಸ್ಪಿನ್ ಬೌಲರ್ ಗಳು ತಂಡದ ಭಾಗವಾಗಿದ್ದಾರೆ..
ಸಹನಾ ಪವಾರ್ ಮತ್ತು ಕನಿಕಾ ಎಸ್ ಅಹುಜಾ ದೊಡ್ಡ ಹಂತದ ಹೊರೆಯನ್ನು ನಿರ್ವಹಿಸಬಲ್ಲರೇ ಎಂಬ ಅನುಮಾನವೂ ಇದ್ದು ಸಮಯವೇ ಉತ್ತರ ಹೇಳಬೇಕಿದೆ..
ಭಾರತೀಯ ಮಣಿಕಟ್ಟಿನ ಸ್ಪಿನ್ನರ್ ಗಳೂ ತಂಡದಲ್ಲಿ ಇಲ್ಲ. ಆಟದಲ್ಲಿ ಮಣಿಕಟ್ಟಿನ ಸ್ಪಿನ್ನರ್ ಗಳು ಆಡುವ ಹನ್ನೊಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ..
ಭಾರತದ ಯುವ ಆಟಗಾರರಾದ ಪ್ರೀತಿ ಬೋಸ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್ ಅಂತರಾಷ್ಟ್ರೀಯ ಆಟಗಾರರೊಂದಿಗೆ ಒಂದು ಒಳ್ಳೆ ಅನುಭವ ಪಡೆಯುವ ಅವಕಾಶ ಹೊಂದಿದ್ದಾರೆ.
ಇವೆಲ್ಲದರ ಹೊರತಾಗಿ ತಂಡ ಬಲಶಾಲಿಯಾಗಿ ಕಂಡುಬರುತ್ತಿದ್ದು , ಈ ಬಾರಿ ಪಂದ್ಯಾವಳಿಯಲ್ಲಿ ಕಪ್ ತಮ್ಮದಾಗಿಸಿಕೊಳ್ತಾರಾ ಅನ್ನೋದು ಅಭಿಮಾನಿಗಳ ಕುತೂಹಲ…
RCB ತಂಡ ಹೀಗಿದೆ..
WPL 2023 RCB ತಂಡ : ಸ್ಮೃತಿ ಮಂಧಾನ, ದಿಶಾ ಕಸತ್, ರಿಚಾ ಘೋಷ್, ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪೂನಮ್, ಪೂನಮ್ ಕೆಮ್ ಬೋಸ್, ಕೋಮಲ್ ಜಂಜಾದ್, ಮೇಗನ್ ಶುಟ್, ಸಹನಾ ಪವಾರ್
WPL : RCB Men’s Team haven’t Won the Cup till now , Will Women’s Team Win..??